ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ-ಬೆಂಗಳೂರು-ಮೈಸೂರು ನಡುವಿನ ಮೂರು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಜೂನ್ 28ರ ನಾಳೆಯಿಂದ ಶಿವಮೊಗ್ಗ-ಯಶವಂತಪುರ ಎಕ್ಸ್’ಪ್ರೆಸ್, ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ ಹಾಗೂ ಮೈಸೂರು-ಶಿವಮೊಗ್ಗ ನಡುವಿನ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆಯಾಗಲಿದೆ.

ಶಿವಮೊಗ್ಗ-ಯಶವಂತಪುರ(16580) ರೈಲು ಪ್ರತಿದಿನ ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು. ಈ ರೈಲಿನ ಸಂಚಾರದಲ್ಲಿ 15 ನಿಮಿಷ ಬದಲಾವಣೆಯಾಗಲಿದ್ದು, 15 ನಿಮಿಷ ತಡವಾಗಿ ಹೊರಡಲಿದೆ.
ಶಿವಮೊಗ್ಗದಿಂದ 3.45ಕ್ಕೆ ಹೊರಡಲಿರುವ ರೈಲು, ಭದ್ರಾವತಿಗೆ 4.03, ತರೀಕೆರೆಗೆ 4.22, ಬೀರೂರಿಗೆ 4.52, ಕಡೂರಿಗೆ 5.03, ಅರಸೀಕೆರೆಗೆ 5.35, ತಿಪಟೂರಿಗೆ 6.00, ತುಮಕೂರಿಗೆ 6.40 ಹಾಗೂ ಯಶವಂತಪುರಕ್ಕೆ 8.30ಕ್ಕೆ ತಲುಪಲಿದೆ.

ಇಲ್ಲಿಯವರೆಗೂ ರಾತ್ರಿ 3.28ಕ್ಕೆ ತುಮಕೂರು ತಲುಪಿ 3.30ಕ್ಕೆ ಹೊರಡುತ್ತಿದ್ದ ಈ ರೈಲು, ನಾಳೆಯಿಂದ ರಾತ್ರಿ 2.18ಕ್ಕೆ ತುಮಕೂರು ತಲುಪಿ 2.20ಕ್ಕೆ ಹೊರಡಲಿದೆ. ಬೆಳಗಿನ ಜಾವ 4.40ಕ್ಕೆ ಯಶವಂತಪುರ ನಿಲ್ದಾಣ ತಲುಪಿ 4.42ಕ್ಕೆ ಹೊರಡುತ್ತಿತ್ತು. ಹೊಸ ಸಮಯದಂತೆ 4.28ಕ್ಕೆ ತಲುಪಿ, 4.30ಕ್ಕೆ ಹೊರಡಲಿದೆ. ಇನ್ನು, ಬೆಳಗಿನ ಜಾವ 5ಕ್ಕೆ ಬೆಂಗಳೂರು ನಿಲ್ದಾಣ ತಲುಪಿ 5.05ಕ್ಕೆ ಹೊರಡುತ್ತಿದ್ದು, ನಾಳೆಯಿಂದ ಬೆಳಗಿನ ಜಾವ 4.50ಕ್ಕೆ ಬೆಂಗಳೂರು ತಲುಪಿ 5.05ಕ್ಕೆ ಹೊರಡಲಿದೆ.

Also read: ಕಲಾಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ `ಸಹನಾ ಚೇತನ್’ ಕಾರ್ಯ ಮಾದರಿ: ತುಳಸಿ ರಾಮಚಂದ್ರ ಪ್ರಶಂಸೆ











Discussion about this post