ಸಾಣೆಹಳ್ಳಿಯ ಶಿವಕುಮಾರ ಕಲಾಸಂಘ ಪ್ರಸ್ತುತಪಡಿಸುವ ನೀನಲ್ಲದೆ ಮತ್ಯಾರು ಇಲ್ಲವಯ್ಯ (ತುಮ್ಹಾರೆ ಸಿವಾ ಔರ್ ಕೋಯಿ ನಹಿ) ಎಂಬ ಬಸವಣ್ಣನವರ Basavanna 38 ವಚನಗಳ ನೃತ್ಯ ರೂಪಕವನ್ನು ಹೊಂಗಿರಣ ಸಂಸ್ಥೆ ವತಿಯಿಂದ ಆ.25ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರಂಗನಿರ್ದೇಶಕ ಸತೀಶ್ ಸಾಸ್ವೆಹಳ್ಳಿ Sathish Sasvehalli ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 12ನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಸೂರ್ಯನಂತೆ ಉದಯಿಸಿದವರು ಬಸವಣ್ಣನವರು. ಬ್ರಾಹ್ಮಣ ಜಾತಿಯಲ್ಲಿ ಜನಿಸಿದರೂ ಉತ್ತಮ ಕುಲವೆಂಬುದು ಕಷ್ಟತನದ ಹೊರೆ ಎಂದು ಬ್ರಾಹ್ಮಣಿಕೆಯ ಸಂಕೇತವಾದ ಜನಿವಾರವನ್ನೇ ಕಿತ್ತೆಸೆದವರು. ಇಂತಹ ಶರಣರ ವಚನಗಳನ್ನು ಉಳಿಸುವ ಉದ್ದೇಶದಿಂದ ಸಾಣೆಹಳ್ಳಿ ಶಿವಕುಮಾರ ಕಲಾಸಂಘ ರಾಜ್ಯ ಮತ್ತು ರಾಷ್ಟ್ರಾದ್ಯಂತ ಈ ನೃತ್ಯ ರೂಪಕ ಹಮ್ಮಿಕೊಂಡಿದೆ ಎಂದರು.
ಅನುಭವ ಮಂಟಪ’ದ ಮೂಲಕ ಇಂದಿನ ಸಂಸತ್ತಿಗೆ ತಳಹದಿ ಹಾಕಿದವರು. ಕಲ್ಯಾಣ ರಾಜ್ಯದ ಅರಸ ಬಿಜ್ಜಳನಲ್ಲಿ ಪ್ರಧಾನಿಯಾಗಿ, ಅರ್ಥಸಚಿವರಾಗಿ ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂದು ತೋರಿಸಿಕೊಟ್ಟವರು. ಅಂದು ಬಸವಣ್ಣನವರು ಮಾಡಿದ ಸಮಾಜೋ-ಧಾರ್ಮಿಕ ಕಾರ್ಯಗಳನ್ನು ಇಂದಿಗೂ ಜಾರಿಯಲ್ಲಿ ತರಲಾಗಿಲ್ಲ ಎಂದರು.
Also read: ಇಂದು ಶಿವಮೊಗ್ಗ ಎಫ್’ಎಂನಲ್ಲಿ ಚಂದ್ರಯಾನ ಲೈವ್ ಸಂವಾದ: ನೀವೂ ಕರೆ ಮಾಡಿ, ಮಾತನಾಡಿ
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಮಗೆ ದೀಕ್ಷೆ ನೀಡಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಬದುಕು-ಬರಹ-ಆಶಯದಂತೆ ಬಸವಾದಿ ಶಿವಶರಣರ ತತ್ವ-ಸಿದ್ಧಾಂತಗಳನ್ನು ಪ್ರಚಾರ, ಪ್ರಸಾರ ಮತ್ತು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾಣೇಹಳ್ಳಿಯನ್ನು ಕೇಂದ್ರವಾಗಿರಿಸಿಕೊಂಡಂತೆ ಅನೇಕ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕ್ರಿಯಾಶೀಲ ಶ್ರೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್‍ಎಸ್. ಜ್ಯೋತಿಪ್ರಕಾಶ್, ಇ .ವಿಶ್ವಾಸ್, ಡಾ. ಧನಂಜಯ ಸರ್ಜಿ, ಧ್ರುವ, ತೇಜಸ್ವಿ, ಮೋಹನ್, ಶ್ರೀಕಂಠಪ್ರಸಾದ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post