ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ #Shivamogga ತಾಲ್ಲೂಕಿನ ಹೊಳಲೂರು ಸೇತುವೆ ಮೇಲೆ ಕರಡಿವೊಂದು #Bear ಪ್ರತ್ಯೇಕ್ಷವಾಗಿರುವ ವಿಡಿಯೋ ವೈರಲ್ ಆಗಿದ್ದು, ಹೊಳಲೂರು ಅಕ್ಕ-ಪಕ್ಕದಲ್ಲಿರುವ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕಾಡಿನಲ್ಲಿ ಇರಬೇಕಾದ ಕಾಡು ಪ್ರಾಣಿಗಳು ನೀರು, ಆಹಾರವನ್ನು ಹುಡುಕಿಕೊಂಡು ಇದೀಗ ನಗರ, ಗ್ರಾಮ ಹಾಗೂ ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ.
ಅದರಂತೆಯೇ ಹೊಳಲೂರು ಸೇತುವೆ ಮೇಲೆ ಕರಡಿಯೊಂದು ಓಡಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಯಿಡಿಯಲಾಗಿದ್ದು, ಈ ವಿಡಿಯೋ ಆ ಭಾಗದ ಜನರ ವಾಟ್ಸಪ್ ಸ್ಟೇಟಸ್‌ನಲ್ಲಿ ವೈರಲ್ ಆಗುತ್ತದೆ.
Also Read>> ಉತ್ತರ ಕನ್ನಡ | ಪದ್ಮಶ್ರೀ ಪುರಸ್ಕೃತ ಎನ್ಸೈಕ್ಲೋಪೀಡಿಯಾ ಆಫ್ ದಿ ಫಾರೆಸ್ಟ್ ‘ತುಳಸಿಗೌಡ’ ವಿಧಿವಶ
ಹೊಳಲೂರು ಸುತ್ತಮುತ್ತ ಕೊಡುಮಗ್ಗೆ, ಸಿದ್ಲಿಪುರ, ನಾಗಸಮುದ್ರ ಗ್ರಾಮಗಳಿದ್ದು, ಈ ವಿಡಿಯೋ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post