ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಅತ್ಯಂತ ಸಜ್ಜನ ರಾಜಕಾರಣಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರಿಗೆ ಬೆದರಿಕೆ ಪೋಸ್ಟ್ ಬಂದಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

Also Read: ಶಿವಮೊಗ್ಗ-ಶಂಕರ ಮಠ ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿತ: ಕಾರಣವೇನು?
ಬಜರಂಗದಳ ಕಾರ್ಯತರ್ಕ ಹರ್ಷನ ಹತ್ಯೆ ವೇಳೆ ಹೇಳಿಕೆ ನೀಡಿದ್ದ ಅರುಣ್ ಅವರಿಗೆ ಫೆ.21ರಂದು ಮುಸ್ತಾಕ್ ಅಲಿ ಎಂಬಾತ ಬೆದರಿಕೆ ಪೋಸ್ಟ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮುಸ್ತಾಕ್ ಅಲಿ ಬೆದರಿಕೆ ಪೋಸ್ಟ್ ಹಾಕಿದ್ದಾನೆ ಎನ್ನಲಾಗಿದ್ದು, ನಿಮ್ಮ ತಲೆಯಲ್ಲಿ ಇಂದು ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು-ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
Also Read: ಉದ್ಯಮಿ ಮಥುರಾ ಗೋಪಿನಾಥ್ ರಿಗೆ ಶುಭಹಾರೈಕೆ
ಈ ಹಿನ್ನೆಲೆಯಲ್ಲಿ ಅರುಣ್ ಅವರು ಆಪ್ತ ಸಹಾಯಕ ವಾಗೀಶ್ ಅವರು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಭದ್ರತೆ ಒದಗಿಸುವಂತೆ ಕೋರಲಾಗಿದೆ. ಅಲ್ಲದೇ, ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















