ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಏರ್ ಪೋರ್ಟ್ ರಸ್ತೆಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವು ಕಂಡಿದ್ದಾನೆ. ಹೆಲ್ಮೆಟ್ ಧರಿಸದ ಕಾರಣ ಯುವಕನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿಹೋಗಿದೆ.
ನಗರದ ಪುಟ್ಟಪ್ಪನ ಕ್ಯಾಂಪ್ ನಲ್ಲಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಡು ವಾಪಾಸ್ ಭದ್ರಾವತಿಯ ಹುಣ್ಸೆಕಟ್ಟೆ ಜಂಕ್ಷನ್ ನಲ್ಲಿರುವ ಮನೆಗೆ ಬೈಕ್ ನಲ್ಲಿ ಹೋಗುವಾಗ ಶಿವಮೊಗ್ಗ ಏರ್‌ಪೋರ್ಟ್ ಗೇಟ್ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಮೃತನನ್ನು ನಿಶ್ಚಿತ್ (20) ಎಂದು ಗುರುತಿಸಲಾಗಿದೆ. ಪೈಂಟ್ ಕೆಲಸ ಮಾಡಿಕೊಂಡಿದ್ದ ನಿಶ್ಚಿತ್ ನಿನ್ನೆ ರಾತ್ರಿ ಮದುವೆ ಕಾರ್ಯಕ್ರಮಕ್ಕೆ ಬಂದು ಊಟ ಮುಗಿಸಿಕೊಂಡು ವಾಪಾಸ್ ಜಂಕ್ಷನ್ ಗೆ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
Also read: ಹಿಂದುತ್ವ ಉಳಿಸುವುದೇ ಕ್ರಾಂತಿವೀರ ಬ್ರೀಗೇಡ್‍ನ ಉದ್ದೇಶ | ಕೆ.ಎಸ್. ಈಶ್ವರಪ್ಪ
ಕಾರು ಮರಕ್ಕೆ ಡಿಕ್ಕಿ: ಪ್ರಯಾಣಿಕರು ಪಾರು
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳ್ಳಿಗದ್ದೆ ತಿರುವಿನಲ್ಲಿ ರಾತ್ರಿ 10ಗಂಟೆ ಸುಮಾರು ಬಲೆನೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಸದ್ಯ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಸೇಫ್ ಆಗಿದ್ದಾರೆ. ಕಾರು ಮಾಲೀಕರು ಶಿವಮೊಗ್ಗದವರಾಗಿದ್ದು, ಮಣಿಪಾಲ್ ಹೋಗುತ್ತಿದ್ದರು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post