ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು, ಶಿವಮೊಗ್ಗ ಕ್ಷೇತ್ರದಿಂದ ಉತ್ಸಾಹಿ ಹಾಗೂ ಯುವ ನಾಯಕ ಡಿ.ಎಸ್. ಅರುಣ್ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ನಮ್ಮ ಭಾರತೀಯ ಜನತಾ ಪಕ್ಷವು ಮತ್ತೆ ಉತ್ತಮ ಕಾರ್ಯಕರ್ತರನ್ನು ಗುರುತಿಸಿದೆ. ಮೊದಲಿನಿಂದಲೂ ಕೂಡ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅನುಭವ ಜೊತೆಗೆ ಪಕ್ಷದ ಹಿರಿಯರ ಆಶೀರ್ವಾದದಿಂದ ಇಂದು ಆಯ್ಕೆಯಾಗಿದ್ದಾರೆ ಹೆಚ್ಚಿನ ಮತದಿಂದ ಗೆದ್ದುಬರಲಿ ಮತ್ತು ಶುಭವಾಗಲಿ. ಡಿ. ಎಸ್ ಅರುಣ್ ಅವರು ನಮ್ಮ ಅಭ್ಯರ್ಥಿ, ಸಂಘಟನೆಗೆ ಬಲ ತುಂಬುವ ಕೆಲಸವನ್ನು ಮಾಡೋಣ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನೂತನ ಅಭ್ಯರ್ಥಿ ಡಿ. ಎಸ್ ಅರುಣ್ ಅವರಿಗೆ ಪಕ್ಷದ ವತಿಯಿಂದ ಸ್ವಾಗತಿಸಿ ಆಶೀರ್ವದಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ. ಡಿ. ಮೇಘರಾಜ್, ಭಾನುಪ್ರಕಾಶ್. ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ್ರು. ಆಯನೂರು ಮಂಜುನಾಥ್..ಎಸ್ ದತ್ತಾತ್ರಿ.ಹಾಗೂ ಮುಖಂಡರು ವಿವಿಧ ಮೋರ್ಚಾದ ಪ್ರಮುಖರು ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post