ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಾನಗರ ಪಾಲಿಕೆಯ ಕಾರ್ಪೊರೇಟರ್’ಗಳಲ್ಲಿ ಕೆಲವು ಪಾರ್ಟಿಯೊಂದರಲ್ಲಿ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಭಾರೀ ವೈರಲ್ ಆಗಿದ್ದು, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ನಗರದ ಹೊರವಲಯದ ಕ್ಲಬ್’ವೊಂದರಲ್ಲಿ ಈ ಪಾರ್ಟಿ ನಡೆದಿದೆ ಎಂದು ಹೇಳಲಾಗಿದ್ದು, ಬಿಜೆಪಿಯಿಂದ ಆಯ್ಕೆಯಾಗಿರುವ ಕೆಲವು ಕಾರ್ಪೊರೇಟರ್’ಗಳು ಕನ್ನಡ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪರ ವಿರೋಧ ಚರ್ಚೆ
ಇನ್ನು, ಬಿಜೆಪಿ ಕಾರ್ಪೊರೇಟರ್ರ್ಸ್ ಈ ರೀತಿ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿರುವ ಜೊತೆಯಲ್ಲೇ ಪರ ವಿರೋಧ ಚರ್ಚೆಯೂ ಸಹ ನಡೆದಿದೆ.
ರಾಜಕಾರಣಿಗಳು ಈ ರೀತಿ ಪಾರ್ಟಿ ಮಾಡಿ, ನೃತ್ಯ ಮಾಡಿರುವುದು ನಮ್ಮ ಸಂಸ್ಕೃತಿಯಲ್ಲ ಎಂದು ಕೆಲವು ಅಭಿಪ್ರಾಯ ವ್ಯಕ್ತವಾಗಿದ್ದರೆ, ಗಣರಾಜ್ಯೋತ್ಸವದ ದಿನವೇ ಇಂತಹ ಪಾರ್ಟಿ ಮಾಡಿರುವುದು ಖಂಡನೀಯ ಎಂದೂ ಸಹ ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಆದರೆ, ವೀಡಿಯೋದಲ್ಲಿರುವ ಸದಸ್ಯರುಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post