ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಲನಚಿತ್ರ ನಟಿ ರನ್ಯಾರಾವ್ ಬಹುದೊಡ್ಡ #Ranya Rao ಗೋಲ್ಡ್ ಸ್ಮಗ್ಲರ್ #Gold Smuggler ಆಗುವುದರ ಹಿಂದೆ ಬಿಜೆಪಿ ಪಕ್ಷ ಮತ್ತು ಅದರ ನಾಯಕರ ಕೈವಾಡವಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರ ವೈ.ಬಿ. ಚಂದ್ರಕಾಂತ್ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ #IPS Officer Ramachandra Rao ಅವರ ಮಗಳಾದ ರನ್ಯಾರಾವ್ ಚಲನಚಿತ್ರರಂಗದಲ್ಲಿ ಮಿಂಚಬೇಕೆಂದು ಬಂದಾಗಾಕೆಯನ್ನು ದುರುಪಯೋಗ ಮಾಡಿಕೊಂಡಿರುವ ಬಿ.ಜೆ.ಪಿ. ನಾಯಕರ ನಂಟಿನಿAದಾಗಿ ಪ್ರಪಂಚದ ಬಹುದೊಡ್ಡ ಗೋಲ್ಡ್ ಸ್ಮಗ್ಲರ್ ಆಗಿದ್ದಾರೆ. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿದ್ದೆ ಆದಲ್ಲಿ ಬಿ.ಜೆ.ಪಿ.ಯ ಘಟಾನುಘಟಿ ನಾಯಕರು ಖೆಡ್ಡಾಕ್ಕೆ ಬೀಳಲಿದ್ದಾರೆಂದು ಹೇಳಿದ್ದಾರೆ.
Also read: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ವೀರೇಶ್ ಕ್ಯಾತನಕೊಪ್ಪ
ಉದ್ಯಮ ನಡೆಸುವುದಕ್ಕೆ ಸರ್ಕಾರದಿಂದ ಜಮೀನು ಮಂಜೂರಾತಿ ಕೋರಿ ಅರ್ಜಿ ಹಾಕಿದವರಿಗೆ ಹತ್ತಾರು ವರ್ಷಗಳೆ ಕಳೆದರು ಜಮೀನು ಮಂಜೂರು ಆಗುವುದು ಕಷ್ಟ. ಅಂತದ್ದರಲ್ಲಿ ರನ್ಯಾರಾವ್‌ಗೆ ಕಬ್ಬಿಣದ ಸಲಾಖೆಗಳ ತಯಾರಿಸುವ ಕಂಪನಿ ತೆರೆಯುವ ಅರ್ಜಿಗೆ ಸರ್ಕಾರದಿಂದ 12 ಎಕರೆ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಂಜೂರು ಮಾಡುತ್ತದೆ ಎಂದರೆ ಇದರ ಹಿಂದೆ ಯಾರಿರಬಹುದೆಂದು ಜಾಡು ಹುಡುಕುತ್ತ ಹೋದರೆ ಶಿಕಾರಿಪುರಕ್ಕೆ ಬಂದು ನಿಲ್ಲುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದಿದ್ದಾರೆ.
ರಾಜ್ಯದ ಕಾಂಗ್ರೇಸ್ ಸರ್ಕಾರದ ಮೇಲೆ ಬಿ.ಜೆ.ಪಿ.ಯವರು ಗೂಬೆ ಕೂರಿಸುವ ಪ್ರಯತ್ನ ಫಲಿಸದು. ರನ್ಯಾರಾವ್ ಎಂಬ ಸ್ಮಗ್ಲರ್ ಹುಟ್ಟಿಕೊಳ್ಳುವುದಕ್ಕೆ ಹಿಂದಿನ ಬಿ.ಜೆ.ಪಿ. ಸರ್ಕಾರದ ಕಾಣಿಕೆ ದೊಡ್ಡದಿದೆ. ಬೆಂಗಳೂರಿನ ರನ್ಯಾರಾವ್ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವ ವಿಮಾನಗಳಲ್ಲಿ ದುಬೈಗೆ ಹೋಗಿ ಬಿಗಿ ಭದ್ರತೆಯ ನಡುವೆಯೂ ಕೇಜಿಗಟ್ಟಲೆ ಬಂಗಾರವನ್ನು ಯಾವುದೆ ಅಡೆತಡೆ ಇಲ್ಲದೆ ತರುತ್ತಿದ್ದರ ಹಿಂದೆ ಬಿ.ಜೆ.ಪಿ. ನಾಯಕರ ಕೈವಾಡ ಇಲ್ಲವೆಂದು ಹೇಳುವುದಕ್ಕೆ ಸಾಧ್ಯವೆ ಇಲ್ಲವೆಂದು ತಿರುಗೇಟು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post