ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಕ್ತದಾನ #Blood Donation ಎಂಬುದು ಶ್ರೇಷ್ಠ ದಾನವಾಗಿದ್ದು, ಕಲಿಯುಗದ ಕರ್ಣನ ದಾನದಂತೆ ಎಂದು ರೋಟರಿ ಮಿಡ್‍ಟೌನ್ ಅಧ್ಯಕ್ಷ ಹರ್ಷಾಕಾಮತ್ ಹೇಳಿದರು.
ಅವರು ಇಂದು ಮಾನಸ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಶಿವಮೊಗ್ಗ, ರೋಟರಿ ಕ್ಲಬ್ ಮಿಡ್‍ಟೌನ್ ಶಿವಮೊಗ್ಗ ಹಾಗೂ ಇತರೆ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ರವೀಶ್ (ಅಧ್ಯಕ್ಷರು, ಐಎಂಎ ಶಿವಮೊಗ್ಗ), ಡಾ. ಸುಬ್ರತ, ಡಾ. ಕೌಸ್, ರೆಡ್‍ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಪ್ರಮುಖರಾದ ದಿನಕರ, ಹಾಗೂ ಆಯೋಜಕರಾದ ಡಾ. ರಜನಿ ಪೈ ಮತ್ತು ಡಾ. ಪ್ರೀತಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ನಗರದಲ್ಲಿನ ಅನೇಕ ಸೇವಾಭಿಮಾನಿಗಳು ಉತ್ಸಾಹದಿಂದ ರಕ್ತದಾನದಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ಸಮಾಜದಲ್ಲಿ ಮಾನವೀಯತೆ, ಸೇವಾ ಮನೋಭಾವ ಮತ್ತು ಸಹೋದರತ್ವದ ಸಂದೇಶವನ್ನು ಹರಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post