ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಸ್ಯಗಳಿಗೆ ಕೊರೊಫಿಲ್ ಯಾವ ರೀತಿ ಅತ್ಯವಶ್ಯಕತೆ ಇದೆಯೊ ಅದೇ ರೀತಿ ಮನುಷ್ಯನಿಗು ರಕ್ತ ತುಂಬ ಅವಶ್ಯಕ ಎಂದು ಕೆ.ಶಿ.ನಾ.ಕೃ.ಮ.ತೋ.ವಿ.ವಿ. ಇರುವಕ್ಕಿ ಶಿಕ್ಷಣ ನಿರ್ದೇಶಕ ಡಾ. ಹೆಮ್ಲಾ ನಾಯಕ್ ಸವಿಸ್ತಾರವಾಗಿ ತಿಳಿಸಿದರು.
ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಆಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಧರಣೆಂದ್ರ ದಿನಕರ್ ಮಾತನಾಡಿ, ತಾವು ಕೂಡ 117 ಬಾರಿ ರಕ್ತದಾನ ಮಾಡಿದ್ದು,ರಕ್ತದಾನದ ಮಹತ್ವ ಮತ್ತು ಯಾರು ರಕ್ತದಾನ ಮಾಡಬಹುದು, ಯಾರು ಮಾಡಬಾರದು ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಡಾ. ಕೆ.ಸಿ. ಶಶಿಧರ್ ವಿಶೇಷ ಅಧಿಕಾರಿಗಳು ಕೃ.ವಿ.ಮ.ವಿ.ಇರುವಕ್ಕಿ ಇವರೂ ಕೂಡ 51 ಬಾರಿ ರಕ್ತದಾನ ಮಾಡಿದ್ದಾರೆಂದು ತಮ್ಮ ಅನುಭವವನ್ನು ಹಂಚಿಕೊಂಡರು. ಮತ್ತು ರಕ್ತದಾನ ಶಿಬಿರದಲ್ಲಿ 79 ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನೋಡಲ್ ಆಫೀಸರ್ ರೆಡ್ ಕ್ರಾಸ್ ಘಟಕ ಡಾ. ಪ್ರಿಯಾ ಕಿವಡಸಣ್ಣವರ ಕಾರ್ಯಕ್ರಮದ ಸಂಯೋಜನೆಯನ್ನು ವಹಿಸಿದ್ದರು ಹಾಗೂ ಹಣಕಾಸು ನಿಯಂತ್ರಣಾಧಿಕಾರಿ ಆತ್ರೇಯ ಮತ್ತು ಡಾ. ನಿಂಗರಾಜು ಡಾ. ಶಿಲ್ಪಾ ಎಮ್( ನಿಲಯ ಪಾಲಕರು) ಸಹ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post