ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಹಾಗೂ ಲಾಕ್‌ಡೌನ್ ಪರಿಣಾಮವಾಗಿ ಅಡುಗೆ ಮತ್ತು ಬಡಿಸುವ ವೃತ್ತಿ ಮಾಡುವವರ ಜೀವನ ಸಂಕಷ್ಟದಲ್ಲಿದ್ದು, ನೆರವು ನೀಡುವಂತೆ ಕೋರಿ ಬ್ರಾಹ್ಮಣ ಅಡುಗೆ ಸಂಘದ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ವರ್ಷದಿಂದ ಕೊರೋನಾ ಮತ್ತು ಲಾಕ್‌ಡೌನ್ ಹಿನ್ನೆಲೆ ಹೆಚ್ಚಿನ ಸಮಾರಂಭಗಳು ನಡೆಯದೆ, ಅಡುಗೆ ಮತ್ತು ಬಡಿಸುವ ವೃತ್ತಿಯನ್ನೆ ನಂಬಿಕೊಂಡಿರುವವರ ಜೀವನ ಸಂಕಷ್ಟದಲ್ಲಿದ್ದು, ಎರಡನೆಯ ಪ್ಯಾಕೇಜ್ ಪ್ರಕಟಣೆ ವೇಳೆ ತಮಗೂ ನೆರವು ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ. ಪ್ರಕಾಶ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post