ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಳೇ ಶಿವಮೊಗ್ಗ ಭಾಗದ ಹಲವು ಬಡಾವಣೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಅವರು ಆದೇಶ ಹೊರಡಿಸಿದ್ದು, ಜುಲೈ 23ರ ಬೆಳಗ್ಗೆ 5 ಗಂಟೆಯಿಂದ ಜುಲೈ 30ರ ಬೆಳಗ್ಗೆ 5 ಗಂಟೆಯವರೆಗೂ ಸೂಚಿಸಲಾಗಿರುವ ವಾರ್ಡ್‌ಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಹಳೇ ಶಿವಮೊಗ್ಗ ಭಾಗದ 12,13, 22, 23, 29, 30 ಹಾಗೂ 33ನೆಯ ವಾರ್ಡ್‌ನಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ಈ ವಾರ್ಡ್‌ಗಳಿಂದ ಯಾರೂ ಹೊರಕ್ಕೆ ಬರುವಂತಿಲ್ಲ ಹಾಗೂ ಯಾರೂ ಒಳಕ್ಕೆ ಹೋಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವೆಲ್ಲಾ ಬಡಾವಣೆಗಳು:
ಬೆಕ್ಕಿನ ಕಲ್ಮಠ, ಬಿಹೆಚ್ ರಸ್ತೆ, ಅಮೀರ್ ಅಹಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣ, ಓಟಿ ರಸ್ತೆ, ಬೈಪಾಸ್ ರಸ್ತೆ, ತುಂಗ ಹೊಸ ಬ್ರಿಡ್ಜ್ ನ ವ್ಯಾಪ್ತಿಯಲ್ಲಿನ ಪ್ರದೇಶಗಳು
ಯಾವುದಕ್ಕೆ ವಿನಾಯ್ತಿ:
ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳಿಗೆ ಸಂಪೂರ್ಣ ವಿನಾಯ್ತಿ
ತರಕಾರಿ, ದಿನಸಿ ಹಾಗೂ ಹಣ್ಣು ಮಾರಾಟಕ್ಕೆ ಮುಂಜಾನೆ 5 ಗಂಟೆಯಿಂದ 10 ಗಂಟೆಯವರೆಗೂ ಮಾತ್ರ ಅವಕಾಶ
Get In Touch With Us info@kalpa.news Whatsapp: 9481252093
Discussion about this post