ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಮಕ್ಕಳ ವೈದ್ಯರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಆ.1ರಿಂದ 7ರ ವರೆಗೆ ಸ್ತನ್ಯಪಾನಕ್ಕೆ ಮೊದಲ ಆದ್ಯತೆ ಹಾಗೂ ನಿರಂತರ ಬೆಂಬಲ ವ್ಯವಸ್ಥೆ’ ಎಂಬ ವಾಕ್ಯದೊಂದಿಗೆ ಹಾಗೂ `ಹುಟ್ಟಿದ ಮಗುವಿಗೆ ಎದೆಹಾಲು ಕುಡಿಸುವುದರಿಂದ ಅವರ ಮುಂದಿನ ಭವಿಷ್ಯವು ಉಜ್ವಲವಾಗಿರುತ್ತದೆ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು ಎಂದು ಸಂಘದ ಅಧ್ಯಕ್ಷ ಡಾ.ಬಿ.ಎಲ್. ಯತೀಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಪ್ತಾಹದಲ್ಲಿ ಸಮುದಾಯದಲ್ಲಿ ಸ್ತನ್ಯಪಾನದ ಬಗ್ಗೆ ಮಹತ್ವದ ಅರಿವು ಹಾಗೂ ಅದರ ಬಗೆಗಿನ ತಪ್ಪು ಕಲ್ಪನೆಯನ್ನು ನಿವಾರಿಸುವ ಸಲುವಾಗಿ ವಿವಿಧ ಶಾಲಾ-ಕಾಲೇಜುಗಳು, ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಕಛೇರಿಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರಿಗೂ ಜಾಗೃತಿ ಮೂಡಿಸಲಾಯಿತು ಎಂದರು.
ತಾಯಿಯ ಹಾಲನ್ನು ಕುಡಿಯುವ ಮಗುವಿಗೆ ಅಗತ್ಯಕ್ಕೆ ಅನುಗುಣವಾಗಿ ಬೇಕಾಗುವ ಪೋಷ್ಠಿಕಾಂಶಗಳು ದೊರೆಯುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಹಾಗೂ ಮಗುವು ಆರೋಗ್ಯಕರವಾಗಿ ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ. ಅದು ಮಾತ್ರವಲ್ಲದೆ, ತಾಯಿಗೂ ಅನೇಕ ಆರೋಗ್ಯಕರ ಲಾಭ ಸಿಗುತ್ತದೆ ಎಂದರು.
ಮಗುವು ಹಸಿವಿನಿಂದ ಅಳಲು ಆರಂಭಿಸಿದಾಗಲೆಲ್ಲಾ ಎದೆಹಾಲು ನೀಡಬಹುದು. ಮಗುವಿಗೆ ಕನಿಷ್ಠ ಎರಡು ಅಥವಾ ಮೂರುಗಂಟೆಗೊಮ್ಮೆ ಎದೆಹಾಲು ನೀಡಬೇಕು. ಎದೆಹಾಲಿನಲ್ಲಿ ವಿಟಮಿನ್ `ಎ’ ಮತ್ತು ಪ್ರತಿಕಾಯಗಳನ್ನು ಒಳಗೊಂಡಿರುವ ಕೊಲೆಸ್ಟ್ರಾಲ್ ನವಜಾತ ಶಿಶುವಿನ ಅಗತ್ಯಗಳಿಗೂ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಎದೆಹಾಲಿನಲ್ಲಿರುವ ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿ ಅಂಶಗಳು ಮಗುವಿನ ದೈಹಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಮಗುವಿಗೆ ಶ್ವಾಸಕೋಸಕ್ಕೆ ಸಂಬಂಧಿಸಿದ ಅನೇಕ ಉಸಿರಾಟದ ತೊಂದರೆಗಳು ಭಾರದಂತೆ ತಡೆಯುತ್ತದೆ. ಎದೆಹಾಲು ಉಣಿಸುವ ಮಗುವಿಗೆ ಟೈಪ್-1 ಹಾಗೂ ಟೈಪ್-2 ಡಯಾಬೀಟಿಸ್, ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಹಾಗೂ ಕರುಳಿನ ಕಾಯಿಲೆಗಳಂತಹ ಅಪಾಯವನ್ನು ಕಡಿಮೆಮಾಡುತ್ತದೆ ಎಂದರು.
ಇಷ್ಟೇಲ್ಲಾ ಪ್ರಯೋಜನ ಇರುವ ಸ್ತನ್ಯಪಾನವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮಗು ಕೇಳಿದಾಗಲೆಲ್ಲಾ ನೀಡಲು ನೈಸರ್ಗಿಕವಾಗಿ ಲಭ್ಯವಿರುತ್ತದೆ. ಹಾಗಾಗಿ ಅಮೃತಕ್ಕೂ ಮಿಗಿಲಾಗಿರುವ ಈ ಎದೆಹಾಲನ್ನು ಮಕ್ಕಳಿಗೆ ಉಣಿಸುವುದು ಅತ್ಯಾವಶ್ಯಕ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ. ರಾಜಾರಾಂ ಯು.ಹೆಚ್., ಖಜಾಂಚಿ, ಡಾ. ಎಂ.ಕೆ. ವಿನೋದ್‍ಕುಮಾರ್, ಸಹಕಾರ್ಯದರ್ಶಿ ಡಾ. ಕೆ.ಎಂ. ವಿಜಯ ಸೂರ್ಯಕಿರಣ, ಡಾ. ಎಸ್.ಎಂ. ವೀರೇಶ್, ಡಾ. ಸುನೀತಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post