ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಂತಿರುವ ಲಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು 15 ಜನರಿಗೆ ಗಾಯಗಳಾದ ಘಟನೆ ಶಿವಮೊಗ್ಗಾಗ- ತೀರ್ಥಹಳ್ಳಿ ರಸ್ತೆಯ ಗಾಜನೂರಿನ ಅಗ್ರಹಾರದಲ್ಲಿ ಇಂದು ಬೆಳಗಿನಜಾವ ನಡೆದಿದೆ. ಇದರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿದೆ.
ಗಾಜನೂರಿನ ಬಳಿ ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ ಡಿಕ್ಕಿ ಡಿಕ್ಕಿ ಹೊಡೆದಿದ್ದು ಎದುರಿನಿಂದ ಬಂದ ವಾಹನದ ಲೈಟ್ ರಿಫ್ಲೆಕ್ಷನ್ ಆದ ಕಾರಣ ಎಡಕ್ಕೆ ಬಸ್ಸನ್ನು ಎಳೆದ ಪರಿಣಾಮ ಸೈಡ್ ನಲ್ಲಿ ಎದುರಿಗೆ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಪ್ರಯಾಣಿಕರಾದ ಚಳ್ಳಕೆರೆಯ ನಿವಾಸಿ ಹರ್ಷಿತ್ (25). ಬಸ್ ನಿರ್ವಾಹಕ ಅಣ್ಣಪ್ಪ (35) ಎಂಬುವರು ಸಾವನ್ನಪ್ಪಿದ್ದಾರೆ. ಅಣ್ಣಪ್ಪನವರು ಹೊಸನಗರ ತಾಲೂಕಿನ ನಿವಾಸಿ ಆಗಿದ್ದು ನಿರ್ವಾಹಕರಾಗಿ ಇತ್ತೀಚೆಗೆ ಸೇರಿಕೊಂಡಿದ್ದರು ಎನ್ನಲಾಗಿದೆ.
ಚಾಲಕನಿಗೆ ತರಿಚಿದ ಗಾಯಗಳಾಗಿವೆ. ಗಂಭೀರವಾದವರಲ್ಲಿ ಮಂಜುನಾಥ್(45), ಪಾಲಮ್ಮ (60), ಪ್ರಸಾದ್ (43) ಸುಜಾತ (40), ಬಿಂದು (20) ಎಂದು ಗುರುತಿಸಲಾಗಿದೆ. ಘಟನೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸ್ಸು ಮಂಗಳೂರಿನಿಂದ ಶಿವಮೊಗ್ಗದ ಕಡೆ ಬರ್ತಾಯಿತ್ತು ಎಂಬ ಮಾಹಿತಿಲಭ್ಯವಾಗಿದೆ. ಗಾಯಾಳುಗಳನ್ನು ಇಲ್ಲಿಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post