ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೆ.22ರಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾತಿ ಜನಗಣತಿಯಲ್ಲಿ #Caste Census ಬ್ರಾಹ್ಮಣ ಸಮುದಾಯದವರು ಬ್ರಾಹ್ಮಣ ಎಂದೇ ನಮೂದಿಸಬೇಕು ಹಾಗೂ ಯಾವುದೇ ಉಪಜಾತಿಯಂದು ನಮೂದಿಸಬಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ರಘುರಾಮ್ ಮನವಿ ಮಾಡಿಕೊಂಡರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಜಾತಿ ಗಣತಿಯಲ್ಲಿ ಬ್ರಾಹ್ಮಣರಲ್ಲಿ #Brahmin ಸುಮಾರು 60 ಉಪಪಂಗಡಗಳನ್ನು ನಮೂದಿಸಿದ್ದು, ಇದರಲ್ಲಿ ಮುಸ್ಲಿಂ ಬಾಹ್ಮಣ ಹಾಗೂ ಕ್ರಿಶ್ಚಿಯನ್ ಬ್ರಾಹ್ಮಣ ಎಂದು ಸೇರಿಸಿ ಅನಗತ್ಯ ಸಮಸ್ಯೆ ಸೃಷ್ಟಿಸಿ ವಿಪ್ರರನ್ನು #VIPRA ವಿಭಜಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸುಮಾರು 38 ವರ್ಷಗಳ ಬಳಿಕ ನಡೆಯಲಿರುವ ಜಾತಿಗಣತಿಯಲ್ಲಿ ವಿನಾಕಾರಣ ಉಪಪಂಗಡಗಳನ್ನು ನಮೂಸಿದಿ ವಿಪ್ರ ಸಮಾಜವನ್ನು ವಿಭಜಿಸುವಂತಹ ಕೆಲಸ ನಡೆಯುತ್ತಿರುವುದು ಖಂಡನೀಯ. ಎಲ್ಲಾ ವಿಪ್ರರು ನಮ್ಮ ಜಾತಿ ಮತ್ತು ಧರ್ಮದ ಬಗ್ಗೆ ಕೇಳಿದಾಗ ಎಲ್ಲರೂ ಒಗ್ಗೂಡಿ ಹಿಂದೂ ಬ್ರಾಹ್ಮಣ ಅಂತಾ ಮಾತ್ರ ಹೇಳಲು ಮತ್ತು ನಮೂದಿಸಬೇಕೆಂದು ಕೋರಿದರು.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ಮುಸ್ಲಿಂ ಬಾಹ್ಮಣ ಹಾಗೂ ಕ್ರಿಶ್ಚಿಯನ್ ಬ್ರಾಹ್ಮಣ ಎಂದು ಸೇರಿಸಿರುವುದನ್ನು ಕೂಡಲೇ ಕೈಬಿಡಬೇಕು. ಸರ್ಕಾರ ಹೊಸ ಹೊಸ ಜಾತಿ ಹುಟ್ಟುಹಾಕಿ ಗೊಂದಲ ಸೃಷ್ಟಿಸುತ್ತಿದೆ. ಸಮೀಕ್ಷೆಯಲ್ಲಿ ಉಪ ಪಂಗಡ ಕಡ್ಡಾಯವಲ್ಲ. ಯಾವುದೇ ಕಾರಣಕ್ಕೂ ಉಪ ಜಾತಿಯನ್ನು ನೊಂದಾಯಿಸಬಾರದು ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದೇ ನಮೂದಿಸುವುದು ಅತ್ಯಾವಶ್ಯಕ ಹಾಗೂ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಯು ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗದಿರುವಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಶಂಕರ್, ಶ್ರೀಕಾಂತ್, ರಾಘವೇಂದ್ರ ಉಡುಪ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post