ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನವರಿ 30 ರಿಂದ ಫೆಬ್ರವರಿ 01 ರವರೆಗೆ ಹರಿಯಾಣದ ಗುರುಗ್ರಾವ್ ಅಮೈಟಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಸಿಬಿಎಸ್‌ಇ ಶಾಲೆಗಳ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ 2024-25ನೇ ಸಾಲಿನ ವಿಜ್ಞಾನ ವಸ್ತುಪ್ರದರ್ಶನದ ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ ಗೋಪಾಳದ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಸಿದ್ಧಾಂತ ಬಿ ಪೃಥ್ವಿ ಮತ್ತು ಡಿ.ಆರ್. ಪ್ರಣಿತ ರೆಡ್ಡಿ ಇವರುಗಳು ಅದ್ವಿತೀಯ ಬ್ಲಾಕ್ ಸೋಲ್ಡರ್ನ್ ಫೈ ಎನ್ನುವ ಶೀರ್ಷಿಕೆ ಅಡಿಯಲ್ಲಿ ಜೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ.
ಇಂತಹ ಅಮೋಘ ಸಾಧನೆಯ ಬೆನ್ನೆಲುಬಾಗಿ ನಿಂತು ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಶ್ವೇತಾ ಎಂ.ಎಸ್ ರವರಿಗೆ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಶುಭಕೋರಿದ್ದಾರೆ.
Also read: ಗಮನಿಸಿ ! ಫೆ.5, 6ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗ ನಗರವನ್ನು ಪ್ರತಿನಿಧಿಸಿ ಶಾಲೆಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮಕ್ಕೆ ಶಾಲೆಯ ಪ್ರಾಂಶುಪಾಲರಾದ ಡಾ.ಸರೋಜಾ ಬಿ ಶಿಳ್ಳಿನ್, ಆಡಳಿತ ಮಂಡಳಿಯವರಾದ ಸುರೇಶ್ ಕುಮಾರ್, ಕೋ ಆರ್ಡಿನೇಟರ್ಸ್, ಬೋಧಕ ಮತ್ತು ಬೋಧಕೇತರ ವೃಂದದವರು ಹಾರೈಸಿ ಶುಭಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post