ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭಾ ಚುನಾವಣೆಯ ಹಿನ್ನೆಲೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ 21,78,000 ರೂ. ಮೌಲ್ಯದ ಬಟ್ಟೆ, ಗೃಹ ಉಪಯೋಗಿ ವಸ್ತುಗಳು, ಅಕ್ಕಿ ಸೇರಿದಂತೆ ದಿನಸಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 2,30,000ರೂ. ಗಳ ಬಟ್ಟೆ ಮತ್ತು ಗೃಹ ಉಪಯೋಗಿ ವಸ್ತುಗಳು, 60,000ರೂ .ಗಳ 80 ಬ್ಯಾಗ್ ಗಳಲ್ಲಿ ತುಂಬಿದ್ದ 24 ಕ್ವಿಂಟಾಲ್ ಅಕ್ಕಿ, ಲಗೇಜ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 1,00,000ರೂ. ಗಳ ಕಾಫಿ ಮತ್ತು ಟೀ ಪುಡಿ. 1,38,000ರೂ. ಗಳ ಹಾರ್ಡ್ ವೇರ್ ಪರಿಕರಗಳು, 1,50,000ರೂ. ಗಳ ಅಡುಗೆ ಎಣ್ಣೆ ಮತ್ತು ಜ್ಯೂಸ್,15,00,000ರೂ. ಗಳ ಬಟ್ಟೆ ಮತ್ತು ಹಾರ್ಡ್ ವೇರ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















