ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕಾರಿಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದಯ್ಯ ಬಿ. ಹಿರೇಮಠ ಅವರಿಗೆ 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ #Chief Minister Gold medal ಘೋಷಣೆ ಆಗಿದೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದಲ್ಲಿ ರೇವಣಸಿದ್ದಯ್ಯ ಅವರು ಮಾಡಿರುವ ಸಾಧನೆಗಾಗಿ ಈ ಪದಕ ಘೋಷಣೆ ಆಗಿದೆ.
ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪದಕ ಪ್ರದಾನ ಮಾಡಲಿದ್ದಾರೆ.
Also read: ಹರಿಪಾದ ಸೇರಿದ ಸದಾಚಾರ ನಿಷ್ಠ, ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ
ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಸಂಶೋಧನೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡುತೋಪು ಬೆಳಸುವಂತಹ ಸಾಧನೆ, ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರೆ ನವೀನ ಆಲೋಚನೆಗಳನ್ನು ಉಪಯೋಗಿಸಿರುವ ಇತ್ಯಾದಿ ಕೆಲಸ ಕಾರ್ಯಗಳ ಮೂಲಕ ಗಣನೀಯ ಸಾಧನೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ ಪ್ರತಿವರ್ಷ ಚಿನ್ನದ ಪದಕ ನೀಡಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post