ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚೋರಡಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದ್ದು, ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾಳಪ್ಪ ಬಸ್ಸಿನ ಚಾಲಕ ಅರುಣ್ ಕುಮಾರ್ (40) ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಿಪ್ಪೇಸ್ವಾಮಿ (50) ಎನ್ನಲಾಗಿದೆ.
ಚೋರಡಿಯಲ್ಲಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 34 ಮಂದಿ ದಾಖಲಾಗಿದ್ದಾರೆ. ನಾಲ್ವರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಸಣ್ಣಪಟ್ಟ ಗಾಯವಾಗಿರುವವರಿಗೆ ಆಯೂನೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also read: ಮಗು ಕಿಡ್ನಾಪ್‌ಯಾಗಿದೆ ಎಂದು ಹುಡುಕಿ ಸುಸ್ತಾಗಿ ಮನೆಗೆ ವಾಪಾಸಾದ ದಂಪತಿಗೆ ಕಾದಿತ್ತು ಅಚ್ಚರಿ! ಏನಿದು ವಿಚಿತ್ರ ಘಟನೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















