ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಪಾಲಿಕೆ ಆಡಳಿತದ ಚುಕ್ಕಾಣಿ ಮಹಿಳಾಮಣಿಗಳ ತೆಕ್ಕೆಗೆ ಜಾರಿದ್ದು, ನೂತನ ಮೇಯರ್ ಆಗಿ ಸುವರ್ಣ ಶಂಕರ್, ಉಪಮೇಯರ್ ಆಗಿ ಸುರೇಖಾ ಮುರಳೀಧರ್ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಇಂದು ಚುನಾವಣಾ ಪ್ರಕ್ರಿಯೆ ನಡೆದಿದ್ದು, ಇಬ್ಬರೂ ಮಹಿಳಾ ಸದಸ್ಯರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುವರ್ಣ ಶಂಕರ್ ಹಾಗೂ ಕಾಂಗ್ರೆಸ್’ನಿಂದ ಯಮುನಾ ರಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುರೇಖಾ ಮುರಳೀಧರ್ ಹಾಗೂ ಕಾಂಗ್ರೆಸ್’ನಿಂದ ಮೆಹಖ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಇಂದು ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಬಿಜೆಪಿಯ ಸುವರ್ಣ ಶಂಕರ್ ಮೇಯರ್ ಆಗಿ, ಸುರೇಖಾ ಮುರಳೀಧರ್ ಉಪಮೇಯರ್ ಆಗಿ ಆಯ್ಕೆಯಾಗಿದ್ದು, ಬಿಜೆಪಿ ವಲಯದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
ಯಾರಿಗೆ ಎಷ್ಟು ಮತ?
ಮೇಯರ್ ಸ್ಥಾನಕ್ಕೆ
ಸುವರ್ಣ ಶಂಕರ್(ಬಿಜೆಪಿ): 26
ಯಮುನಾ ರಂಗೇಗೌಡ(ಕಾಂಗ್ರೆಸ್): 12
ಉಪಮೇಯರ್ ಸ್ಥಾನಕ್ಕೆ
ಸುರೇಖಾ ಮುರಳೀಧರ್(ಬಿಜೆಪಿ): 26
ಮೆಹಖ್(ಕಾಂಗ್ರೆಸ್): 12
Get in Touch With Us info@kalpa.news Whatsapp: 9481252093

















