ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಂಬಳ ಗಂಡು ವೀರರ ಕ್ರೀಡೆ ಇದನ್ನು ಮಲೆನಾಡಿಗೆ ಪರಿಚಯಿಸುತ್ತಿರುವ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಸಮಿತಿಯ ಗೌರವಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಅವರು ಇಂದು ಮಾಚೇನಹಳ್ಳಿ ತುಂಗಭದ್ರಾ ಜಂಕ್ಷನ್ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಬಳಿ ಇರುವ 16 ಎಕರೆ ಜಾಗದಲ್ಲಿ ತುಂಗಭದ್ರ ಜೋಡು ಕರೆ ಕಂಬಳ #Kambala ಸಮಿತಿ ವತಿಯಿಂದ ಶಿವಮೊಗ್ಗ ಸಾಂಸ್ಕೃತಿಕ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿರುವ ತುಳುನಾಡಿನ ವೀರ ಜಾನಪದ ಪ್ರತಿಷ್ಠಿತ ಶ್ರೀಮಂತ ಐತಿಹಾಸಿಕ ಕ್ರೀಡೆ ಮಲೆನಾಡು ತುಂಗಭದ್ರ ಜೋಡು ಕರೆ ಕಂಬಳ 2025 ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಕಂಬಳ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿದೆ. ಭಾರತದ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ತೋರಿಸುತ್ತಾ ಇದೆ. ಈ ಕ್ರೀಡೆಯ ಬಗ್ಗೆ ರಾಜ್ಯದ ಎಲ್ಲಾ ಜನರಲ್ಲೂ ಆಸಕ್ತಿ ಮತ್ತು ಕುತೂಹಲ ಹುಟ್ಟಿದೆ. ವೀರ ಗಂಡುಗಲಿ ಕ್ರೀಡೆಯಾದ ಇದನ್ನು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಮಾಡುತ್ತಿದ್ದು ಎಲ್ಲರೂ ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಕೆಇ ಕಾಂತೇಶ್ ಮಾತನಾಡಿ ಈ ಕ್ರೀಡೆ ಯಾವುದೇ ಜಾತಿಗೆ ಸೀಮಿತವಲ್ಲ. ಪಕ್ಷ ಭೇದ ಮರೆತು ಹಬ್ಬದ ರೀತಿಯಲ್ಲಿ ಆಚರಣೆ ಮಾಡೋಣ ಎಂದರು
Also read: 5ನೇ ದಿನಕ್ಕೆ ಕಾಲಿಟ್ಟ ಭೂಮಿ ವಂಚಿತರ ಹೋರಾಟ ಸಮಿತಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಕಂಬಳ ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ, ಇಂದು ಭೂಮಿ ಪೂಜೆಗೆ ಆಗಮಿಸಿದವರೆಲ್ಲ ಕಂಬಳದ ಉಳಿವಿಗಾಗಿ ಹೋರಾಡಿದವರು ಮತ್ತು ಕಂಬಳದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇತಿಹಾಸ ಬರೆದಿದ್ದಾರೆ ಇಲ್ಲಿ ಬಂದಿರುವ ಶ್ರೀಕಾಂತ್ ಭಟ್ ಅವರ ಕೋಣಗಳು ಮೊನ್ನೆ ನಡೆದ ಕಂಬಳದಲ್ಲಿ ಮೂರು ಪ್ರಥಮ ಬಹುಮಾನ ಗೆದ್ದು ದಾಖಲೆ ಬರೆದಿದ್ದಾರೆ ಎಂದರು.
ಎಂಟು ಜಿಲ್ಲೆಗಳ ಜನರು ಇದರಲ್ಲಿ ಭಾಗವಹಿಸುತ್ತಾರೆ. ಬೈಂದೂರು ಉಡುಪಿ ದಕ್ಷಿಣ ಕನ್ನಡ ಕಾಸರಗೋಡು ಶಿವಮೊಗ್ಗ ಸೇರಿ ಮುಂದಿನ ದಿನಗಳಲ್ಲಿ ದೊಡ್ಡ ಸಮಿತಿ ರಚನೆ ಆಗಲಿದೆ. ಎಲ್ಲಾ ಗೌರವಾಧ್ಯಕ್ಷರು ಮತ್ತು ಮಾರ್ಗದರ್ಶಕರನ್ನು ಸೇರಿಸಿ ಸಮಿತಿ ರಚನೆ ಆಗಲಿದ್ದು ಇದು ಕಮರ್ಷಿಯಲ್ ಅಲ್ಲ ಕೆಲವರು ಆರೋಪ ಹೊರಿಸುತ್ತಾರೆ. ಕಂಬಳ ಉಳಿಯಬೇಕು ಇದರ ಅಭಿಮಾನಿ ಬಳಗ ಹೆಚ್ಚಿಸಬೇಕು ಎಂಬುದೇ ಉದ್ದೇಶವಾಗಿದ್ದು ಶಿವಮೊಗ್ಗ ಸಾಂಸ್ಕೃತಿಕ ತವರೂರಾಗಿದ್ದು ಈ ಕಂಬಳದಲ್ಲಿ ಸುಮಾರು 100 ಜೊತೆ ಕಂಬಳದ ಕೋಣಗಳು ಬರಲಿವೆ. ಎಂದರು
ಜೊತೆಗೆ 250ಕ್ಕೂ ಹೆಚ್ಚು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು ಮತ್ತು ಅಲ್ಲಿನ ತಿಂಡಿ ತಿನಿಸುಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷಗಾನ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಗೀತ ರಸ ಸಂಜೆ. ಯಕ್ಷಗಾನ. ಜಾನಪದ ಕಾರ್ಯಕ್ರಮಗಳು ನಡೆಯಲಿವೆ ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕಂಬಳದ ಪ್ರಮುಖರಾದ ವಿಜಯಕುಮಾರ್ ಮಾತನಾಡಿ ದಕ್ಷಿಣ ಕನ್ನಡ. ಉಡುಪಿ. ಉತ್ತರ ಕನ್ನಡ .ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಬಳ ಆಯೋಜನೆಗೆ ಅನುಮತಿ ಸಿಕ್ಕಿದೆ. ಕರಾವಳಿಯ ಜನಪದ ಕ್ರೀಡೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಇದು ಎಂದರು.
ಈ ಸಂದರ್ಭದಲ್ಲಿ ಹಲವಾರು ಕಂಬಳಗಳ ಆಯೋಜಕರು ಮತ್ತು ಕೋಣಗಳ ಮಾಲೀಕರು. ಕಂಬಳ ಸಮಿತಿಯ ಪದಾಧಿಕಾರಿಗಳು ಪ್ರಮುಖರಾದ ರೋಹಿತ್ ಹೆಗಡೆ .ನವೀನ್ ಚಂದ್ರ ಆಳ್ವ ವಸಂತ್ ಶೆಟ್ಟಿ. ಶಶಿ. ಸುಕುಮಾರ್ ಶೆಟ್ಟಿ. ಗಣೇಶ್. ವಿಜಯ್ ಕುಮಾರ್. ಚಂದ್ರಹಾಸ್. ದೀಪಕ್. ಅರುಣ್ ಕುಮಾರ್ ಶೆಟ್ಟಿ. ಶ್ರೀಕಾಂತ್ ಭಟ್. ಈ ವಿಶ್ವಾಸ್. ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post