ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ನೇತೃತ್ವದಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನಗರದ ಮೂಲಸೌಕರ್ಯ, ಆಡಳಿತಾತ್ಮಕ ಪಾರದರ್ಶಕತೆ ಮತ್ತು ಸೌಂದರ್ಯೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಈ ಕೆಳಕಂಡ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಯಿತು. ಮೂಲಸೌಕರ್ಯ ಮತ್ತು ಆಡಳಿತ ಸುಧಾರಣೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮನ್ವಯ ಕಾಮಗಾರಿಗಳ ಗುಣಮಟ್ಟ ಮತ್ತು ಕಾಲಮಿತಿಯನ್ನು ಖಚಿತಪಡಿಸಲು ಅಧಿಕಾರಿಗಳು ಮತ್ತು ಟೆಂಡರ್ದಾರರ ನಡುವೆ ಸಮನ್ವಯತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮತ್ತು ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಗಳ ಟೆಂಡರ್‍ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು ಸೂಚಿಸಲಾಯಿತು.
ವಿದ್ಯುತ್ ನಿಧಿ ಮತ್ತು ಬೀದಿ ದೀಪ ನಿರ್ವಹಣೆ: ವಿದ್ಯುತ್ ನಿಧಿಯನ್ನು ಸಮರ್ಥವಾಗಿ ಬಳಸಿಕೊಂಡು, ನಗರದಾದ್ಯಂತ ಹಾಳಾಗಿರುವ ಬೀದಿ ದೀಪಗಳನ್ನು ತ್ವರಿತವಾಗಿ ಸರಿಪಡಿಸಲು ನಿರ್ದೇಶಿಸಲಾಯಿತು. ಪ್ರತಿದಿನ ಸಂಜೆ 6 ಗಂಟೆಯ ನಂತರ ವಿದ್ಯುತ್ ಅಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಯಿತು.
ಅನುದಾನಿತ ಕಾಮಗಾರಿಗಳ ಪ್ರಗತಿ
ಆಮೆಗತಿಯಲ್ಲಿ ಸಾಗುತ್ತಿರುವ ಅಥವಾ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಪರಿಶೀಲಿಸಿ, ಗಡುವಿನೊಳಗೆ ಪೂರ್ಣಗೊಳಿಸಲು ಆದೇಶಿಸಲಾಯಿತು. ರಸ್ತೆ, ಸಂಚಾರ ಮತ್ತು ಸಾರ್ವಜನಿಕ ಸುರಕ್ಷತೆ “ಶೂನ್ಯ ಗುಂಡಿ” ಅಭಿಯಾನ ಸಾರ್ವಜನಿಕರಿಗೆ ಮಾರಣಾಂತಿಕವಾಗಿ ಪರಿಣಮಿಸಿರುವ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಲಾಯಿತು. ಡಿಸೆಂಬರ್ ತಿಂಗಳಿನಲ್ಲಿ `ಶೂನ್ಯ ಗುಂಡಿ’ ಅಭಿಯಾನದ ಅಡಿಯಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲು ಗುರಿ ನಿಗದಿಪಡಿಸಲಾಯಿತು. ಪ್ರತೀ ಪಾಲಿಕೆ ಇಂಜಿನಿಯರ್ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳ ಬಗ್ಗೆ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಯಿತು.
ರಸ್ತೆ ದುರಸ್ತಿ ಮತ್ತು ಸಂಚಾರ ನಿಯಂತ್ರಣ
ಅಗತ್ಯವಿರುವ ಕಡೆಗಳಲ್ಲಿ ರಸ್ತೆ ದುರಸ್ತಿ ಮತ್ತು ವೈಜ್ಞಾನಿಕವಾಗಿ ಹಂಪ್ಸ್‍ಗಳನ್ನು ನಿರ್ಮಿಸುವ ಕುರಿತು ಹಾಗೂ ನಗರದ ಪ್ರಮುಖ ಜಂಕ್ಷನ್‍ಗಳಲ್ಲಿರುವ ಸಿಗ್ನಲ್ ಪಾಯಿಂಟ್‍ಗಳ ಸಮಸ್ಯೆಗಳನ್ನು ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ನೆಹರು ರಸ್ತೆ ಅಭಿವೃದ್ಧಿ
ನೆಹರು ರಸ್ತೆಯ ಕನ್ಸರ್ವೆನ್ಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ದ್ವಿಚಕ್ರ ವಾಹನಗಳ ನಿಲುಗಡೆಗೆ (ಪಾರ್ಕಿಂಗ್) ಅವಕಾಶ ಮಾಡಿಕೊಡುವುದು ಮತ್ತು ಸಾರ್ವಜನಿಕ ಶೌಚಾಲಯಗಳ ಅಭಿವೃದ್ಧಿಗೆ ಒತ್ತು ನೀಡಲಾಯಿತು.
ನಗರದ ಸೌಂದರ್ಯ ಮತ್ತು ಸ್ಮಾರಕಗಳ ರಕ್ಷಣೆ ಮಹಾತ್ಮ ಗಾಂಧಿ ಪಾರ್ಕ್: ನಗರದ ಹೆಮ್ಮೆಯ ಮಹಾತ್ಮ ಗಾಂಧಿ ಪಾರ್ಕ್‍ನ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ವರದಿ ಸಲ್ಲಿಸಲು ಸೂಚಿಸಲಾಯಿತು. ವಿಶೇಷವಾಗಿ, ಪಾರ್ಕ್‍ನಲ್ಲಿರುವ ರೈಲು ಕಾರ್ಯಾಚರಣೆಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ನಿರ್ದೇಶಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















