ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬ್ಯೂಟಿಷಿಯನ್ಸ್ ಅಸೋಸಿಯೇಷನ್‌ನ ಸದಸ್ಯರಿಗೆ ನಗರದಲ್ಲಿ ಇತ್ತೀಚೆಗೆ ಕೋವಿಡ್ ಲಸಿಕೆ ಹಾಕಲಾಯಿತು.
ಜಿಲ್ಲಾ ಸವಿತಾ ಸಮಾಜದ ಸಂಪೂರ್ಣ ಸಹಕಾರದೊಂದಿಗೆ ಈ ಅಭಿಯಾನ ನಡೆಸಲಾಯಿತು. ಲಸಿಕಾಕರಣಕ್ಕೆ ಸಹಕರಿಸಿದ ಸವಿತಾ ಸಮಾಜದ ಅಧ್ಯಕ್ಷ ಎಂ.ಜಿ. ಬಾಲು, ರಾಜ್ಯ ಸವಿತಾ ನಿಗಮ ಮಂಡಳಿಯ ರಾಜ್ಯ ನಿರ್ದೇಶಕ ಬಿ.ಎನ್. ಧರ್ಮರಾಜ್, ಮಹಾನಗರಪಾಲಿಕೆ ಸದಸ್ಯರು, ತಾಲೂಕು ಸವಿತಾ ಸಮಾಜದ ಅಧ್ಯಕ್ಷರು, ಸಮಾಜದ ಎಲ್ಲಾ ಸದಸ್ಯರಿಗೆ, ಬೋರ್ಗಿ, ಅಮೋಘ್ ಇನ್ನಿತರರಿಗೆ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ಅಧ್ಯಕ್ಷೆ ನಾಗವೇಣಿ (ವಾಣಿ) ಕೃತಜ್ಞತೆ ಸಲ್ಲಿಸಿದ್ದಾರೆ.
ಅಸೋಸಿಯೇಷನ್‌ನ ಪ್ರಮುಖರಾದ ಅಪರ್ಣಾ, ಸುಷ್ಮಾ, ಸುರೇಖಾ, ಭಾಗ್ಯಾ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post