ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ವಜ್ರೇಶ್ವರಿ ಮಹಾಗಣಪತಿಯ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 17 ನೇ ವಾರ್ಷಿಕೋತ್ಸವ ಮತ್ತು ಅಷ್ಟಬಂದ, ಪುನರ್ ಪ್ರತಿಷ್ಠೆ, ಅಶ್ವಥ್ ಕಟ್ಟೆ ನಾಗದೇವತೆ ಹಾಗೂ ನವಗ್ರಹಕ್ಕೆ ಕಲಾ ಹೋಮ, 108 ಕುಂಬಾಭಿಷೇಕ , ಬ್ರಹ್ಮಕುಂಭಾಭಿಷೇಕ, ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಜೆ 7 ಗಂಟೆಗೆ ಯಕ್ಷಗಾನ ಕಲಾವಿದ ಗಾನಲಹರಿ ಸುರೇಶ್ ಶೆಟ್ಟಿ ಅವರಿಂದ ಪೌರಾಣಿಕ ಕಾಳಿದಾಸ ಯಕ್ಷಗಾನ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಪಾಲಿಕೆ ಉಪ ಮೇಯರ್ ಶಂಕರ್ ಗನ್ನಿ, ಸದಸ್ಯೆ ರೇಖಾ ರಂಗನಾಥ್, ವಜ್ರೇಶ್ವರಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಗೋಪಿ ಆಚಾರಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ಪದಾಧಿಕಾರಿಗಳಾದ ಪುರುಷೋತ್ತಮ್, ಕೆ.ರಂಗನಾಥ್, ಶಿವು, ಕೇಶವಮೂರ್ತಿ, ಶ್ರೀನಿವಾಸ್ ದೇವರಾಜ್, ಸೋಮೇಶ್ ರಾಜೇಶ್ ಇತರರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post