ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಎಎ ವೃತ್ತದಲ್ಲಿ ಅಲಂಕಾರ ತೆರವುಗೊಳಿಸುವ ವಿಚಾರಕ್ಕೆ ಶುಕ್ರವಾರ ರಾತ್ರಿ ಎರಡು ಕೋವಿನನವರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಏರ್ಪಟ್ಟಿತ್ತು.
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ನಗರದ ಅಮೀರ್ ಅಹಮದ್ ಸರ್ಕಲ್ AA Circele Shivamogga ಮತ್ತು ಶಿವಪ್ಪನಾಯಕ ಪ್ರತಿಮೆ ಸಮೀಪ ಮಾಡಿದ್ದ ಅಲಂಕಾರ ತೆರವು ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಎರಡು ಕೋಮುನವರು ಗುಂಪು ಗೂಡಿದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸಿದರು.
ಎರಡು ಕಡೆಯ ಯುವಕರು ಗಂಪುಗೂಡಿ ಘೋಷಣೆ ಕೂಗಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಎರಡು ಗುಂಪುಗಳ ಜೊತೆ ಚರ್ಚೆ ನಡೆಸಿ, ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.
Also read: ಮೋದಿ ಸರ್ಕಾರದ ನೀತಿಗಳಿಂದ ಯುವಕರು ಮತ್ತು ಮಹಿಳೆಯರಿಗೆ ಹೆಚ್ಚು ಲಾಭವಾಗುವಂತೆ PHDCCI ಗಮನಹರಿಸಬೇಕು: ಅಮಿತ್ ಶಾ
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, Mithun Kumar ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಯಾರು ಗೊಂದಲ ಮೂಡಿಸುವ ಹೇಳಿಕೆ ನೀಡಬಾರದು. ಅಲಂಕಾರ ಸಂಬಂಧ ಗೊಂದಲ ಉಂಟಾಗಿತ್ತು. ಎರಡೂ ಕಡೆಯವರ ಜೊತೆಗೆ ಮಾತನಾಡಿದ್ದು, ಸಮಾಧಾನಪಡಿಸಲಾಗಿದೆ. ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post