ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜು. 13ರಂದು ಸಂಜೆ 6 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ರಘುನಾಥ್, ಹಾಗೂ ಜಿಲ್ಲಾ ಪ್ರತಿನಿಧಿ ಎನ್.ಎಂ. ರಘುರಾಮ್ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಸನಗರದಲ್ಲಿ ಉಚಿತ ಗುರುಕುಲ ಶಿಕ್ಷಣ ನೀಡುತ್ತಿರುವ ಪುರೋಹಿತರಾದ ವೇ.ಬ್ರ. ಶ್ರೀ ರಾಘವೇಂದ್ರ ಘನಪಾಠಿಗಳು ಹಾಗೂ ವೈದ್ಯಕೀಯ ಕ್ಷೇತ್ರ ಹಾಗೂ ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ವೈದ್ಯರಾದ ಡಾ.ಪಿ. ನಾರಾಯಣ್, ಡಿವಿಎಸ್ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರಾದ ಎನ್. ರಾಮಮೂರ್ತಿ, ಹಿರಿಯ ಲೆಕ್ಕ ಪರಿಶೋಧಕರು, ಸಮಾಜಸೇವಕರಾದ ಕೆ.ವಿ. ವಸಂತಕುಮಾರ್, ಮನೆಮದ್ದು ಮೂಲಕ ಖ್ಯಾತರಾದ ಉಮಾಕೃಷ್ಣಮೂರ್ತಿ ರಾಷ್ಟ್ರಸೇವಿಕ ಸಮಿತಿಯಲ್ಲಿ ಕೌನ್ಸೆಲಿಂಗ್ ಮಾಡುತ್ತಾ ಪ್ರಸಿದ್ಧರಾಗಿರುವ ನಾಗರತ್ನ ಪ್ರಸನ್ನ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಇದ್ದು, ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ. ಇಂದು ಸಂಜೆ 6.30ಕ್ಕೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅ.ಪ. ಗಣೇಶ್ ಭಟ್ ಇವರಿಗೆ ಗುರುವಂದನೆ ಸಲ್ಲಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ಮತ್ತು ನಿರ್ದೇಶಕರಾದ ವೆಂಕಟೇಶ್ ಮೂರ್ತಿ, ಸೂರ್ಯನಾರಾಯಣ್, ಶಂಕರನಾರಾಯಣ್, ಸುಬ್ರಹ್ಮಣಭಟ್, ರಾಘವೇಂದ್ರ ಉಡುಪ, ಸರಳಾ ಹೆಗ್ಡೆ, ಕೇಶವಮೂರ್ತಿ, ಕುಲಕರ್ಣಿ, ರಾಮಗೋಪಾಲ ಶಾಸ್ತ್ರಿ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post