Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ್ರೋಹಿ ಎಸ್ ಡಿ ಪಿ ಐ – ಪಿಎಫ್ಐ ಜೊತೆ ಕಾಂಗ್ರೆಸ್ ನೇರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ K S Eshwarappa ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ್ರೋಹಿ ಸಂಘಟನೆಗಳು ಬಾಂಬ್ ಉತ್ಪಾದನೆ ಪ್ರಯತ್ನ ನಡೆಸಿ, ಉಗ್ರ ಚಟುವಟಿಕೆಯಲ್ಲಿ ಈ ಸಂಘಟನೆಗಳು ಯುವಕರಿಗೆ ಕುಮ್ಮಕ್ಕು ನೀಡಿತ್ತು. ರಾಜ್ಯದ ಗೃಹ ಇಲಾಖೆ ಈ ರೀತಿ ದುಷ್ಕೃತ್ಯ ನಡೆಸಿದವರನ್ನು ಬಂಧಿಸಿತ್ತು. ಅನೇಕ ಮುಸಲ್ಮಾನ್ ಗೂಂಡಾಗಳನ್ನು ಗಡಿಪಾರು ಮಾಡಿದೆ ಎಂದರು.
ಶಾಂತವಾಗಿದ್ದ ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿತ್ತು. ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಲಾಗಿತ್ತು. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಬಂಧಿತ ವ್ಯಕ್ತಿ ಅಮಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಆದರೆ ಆತ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವುದು ಗೊತ್ತಾಗಿದೆ. ಹೀಗಿದ್ದರೂ ಕೆಲವು ಕಾಂಗ್ರೆಸ್ ಮುಖಂಡರು ದೇಶದ್ರೋಹಿಗಳನ್ನು ಬೆಂಬಲಿಸಿಕೊಂಡು ಬರುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸುವುದಿಲ್ಲ ಎಂದು ನಾನು ಇದನ್ನು ಮೊದಲೇ ಹೇಳಿದ್ದೆ. ಅವರು ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದಿದ್ದೆ. ಅಲ್ಲಿ ಹಿಂದುಳಿದವರ ಸಂಖ್ಯೆ ಹೆಚ್ಚಿದೆ. ಸಿದ್ದರಾಮಯ್ಯ ಎಲ್ಲಿ ಹೋಗ್ತಾರೋ ಗೊತ್ತಿಲ್ಲ. ಬದಾಮಿ ಕ್ಷೇತ್ರ ದೂರ ಆಗುತ್ತೆ, ವರುಣಗೂ ಹೋಗಲ್ಲ. ಮೂರ್ನಾಲ್ಕು ಬಾರಿ ಗೆದ್ದ ಚಾಮುಂಡೇಶ್ವರಿ ಕ್ಷೇತ್ರ ಹತ್ತಿರವಿದೆ. ಅಲ್ಲಿ ಹೋಗಲ್ಲ ಇವರು. ಏಕೆಂದರೆ ಅಲ್ಲಿ ಅವರಿಗೆ ಜನ ಸೋಲಿಸ್ತಾರೆ ಎಂಬ ಭಯ ಇದೆ ಎಂದು ವ್ಯಂಗ್ಯವಾಡಿದರು.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ. ಇದನ್ನು ಹಿಂದಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ. ಸಿದ್ದರಾಮಯ್ಯಗೆ ಯಾವುದೇ ಜಾತಿ ಬೆಂಬಲ ಇಲ್ಲ. ಲಿಂಗಾಯತರು ಬೆಂಬಲಿಸಲ್ಲ, ಒಕ್ಕಲಿಗರು ಮತ ಹಾಕಲ್ಲ. ಕುರುಬರು ಅವರ ಜೊತೆ ಇಲ್ಲ. ಅಲ್ಪಸಂಖ್ಯಾತರನ್ನು ಮಾತ್ರ ಅವರು ಅವಲಂಬಿಸಿದ್ದಾರೆ ಎಂದರು.
ಬಿಜೆಪಿ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಹೀಗಾಗಿ ಅಲ್ಲಲ್ಲಿ ಅಸಮಾಧಾನ ಇರುವುದು ಸಹಜ. ಪಕ್ಷದಲ್ಲಿನ ಎಲ್ಲಾ ಗೊಂದಲ ನಿವಾರಣೆ ಆಗುತ್ತೆ. ಸಚಿವ ವಿ. ಸ%