ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಜನರ ಭಾವನೆಗಳೊಡನೆ ವಿವಿಧ ತಂತ್ರಗಳಿಂದ ಆಟವಾಡುತ್ತಿರುವ ಕಾಂಗ್ರೆಸ್ ಪಕ್ಷವು, ತಮ್ಮ ಹೊಸ ಕಾರ್ಯತಂತ್ರಗಳಿಂದ ರಾಜ್ಯದ ಕಾರ್ಯಾಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಹಳ ಪ್ರಯತ್ನದಲ್ಲಿರುವುದು ಕಂಡುಬರುತ್ತಿದ್ದು, ಇದು ಅಪಾಯಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲು ರಾಜ್ಯದ ಜನರು ತೀರ್ಪು ನೀಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಬೇಕಾದರು ಸರ್ಕಾರದ ತೀರ್ಮಾನಗಳನ್ನು,ನೀತಿಗಳನ್ನು ಆಡಳಿತ ರೂಢ ಪಕ್ಷದ ಪ್ರಜಾಪ್ರತಿನಿಧಿಗಳು ತೆಗೆದುಕೊಳ್ಳಬೇಕಾದ ತೀರ್ಮಾನವಾಗಿರುತ್ತದೆ. ಇದೇ ಸಂವಿಧಾನದ ಆಶಯ ಹಾಗೂ ಇದರ ಉದ್ದೇಶ ಸರ್ಕಾರದ ತೀರ್ಮಾನಗಳು ಜನಹಿತವಾಗಿರಬೇಕು ಎಂಬುದಾಗಿದೆ ಎಂದಿದ್ದಾರೆ.

Also read: ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣಕ್ಕೆ ಮೋಕ್ಷ ಎಂದು?
ದೇಶದಾದ್ಯಂತ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ನಮ್ಮ ರಾಜ್ಯದಲ್ಲಿ ಅಧಿಕಾರ ಸಾಧಿಸಲು, ತಂತ್ರ ರೂಪಿಸಿ ಅರೇ ಬೆಂದ ಗ್ಯಾರಂಟಿಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ರಾಜ್ಯದ ಜನರ ದಿಕ್ಕನ್ನು ತಪ್ಪಿಸಿ ಉಚಿತಗಳ ಭರವಸೆಯನ್ನು ನೀಡಿ ರಾಜ್ಯದಲ್ಲಿ ಅಧಿಕಾರ ಸಾಧಿಸಿತು. ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಇದರ ಅರ್ಥ ದುಡಿದು ಗಳಿಸಿ ತಿನ್ನಬೇಕು,ಸೂಕ್ಷ್ಮವಾಗಿ ಪುಕ್ಕಟೆಯಾಗಿ ತಿನ್ನಬಾರದೆಂದು ಸಂದೇಶ ನೀಡಿದರು. ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲಲು ಹಾಗೂ ಚುನಾವಣೆ ಗೋಸ್ಕರ ಹಿಂದೆಂದೂ ಇವರು ಅಧಿಕಾರವಧಿಯಲ್ಲಿದ್ದರೂ ಜನರ ಕಲ್ಯಾಣ ಹಾಗೂ ಕಾಳಜಿ ತೋರದ ಇವರುಗಳು ಜನರ ಭಾವನೆ, ಆತ್ಮಭಿಮಾನ ಹಾಗೂ ಆತ್ಮ ನಿರ್ಭರತೆ ಜೊತೆಗೆ ಆಟವಾಡುತ್ತಿರುವುದನ್ನು ಗಮನಿಸುತ್ತಾ ಇದ್ದೇವೆ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post