ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿಯವರು #Rahul Gandhi ಅಗ್ನಿಪಥ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ಇದು ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಅವರು ಯುವಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಉಮೇಶ್ ಬಾಪಟ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಗ್ನಿಪಥ್ ಯೋಜನೆಯು #Agnipath Scheme ಭಾರತದ ಸೈನ್ಯವನ್ನು ಬಲಪಡಿಸುವ ದೇಶವನ್ನು ಕಾಪಾಡುವ ದೇಶ ಸೇವೆಯೇ ಪರಮೋಚ್ಛ ಎಂದು ಬಿಂಬಿಸುವ ಯೋಜನೆಯಾಗಿದೆ. ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್‍ಗಾಂಧಿಯವರು ಈ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

Also read: ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದ ಬಸವರಾಜ್ ಮನೆಗೆ ಮಾಜಿ ಡಿಸಿಎಂ ಈಶ್ವರಪ್ಪ ಭೇಟಿ
18 ವರ್ಷ ಮೇಲ್ಪಟ್ಟವರು, ಈ ಯೋಜನೆಯಡಿ ಸೈನ್ಯಕ್ಕೆ ಸೇರಬಹುದು. ಇವರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಗಾಗಿಯೇ ಒಬ್ಬೊಬರಿಗೆ 1 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದು 4 ವರ್ಷದ ಅವಧಿಗೆ ಇರುತ್ತದೆ. ವಾಪಾಸ್ಸು ಬಂದ ಮೇಲೆ ಡಿಗ್ರಿ ಪ್ರಮಾಣ ಪತ್ರ ಜೊತೆಗೆ 12 ಲಕ್ಷ ರೂ. ನಗದನ್ನು ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳು 35 ಸಾವಿರದಿಂದ 45 ಸಾವಿರದವರೆಗೆ ವೇತನ ನೀಡಲಾಗುತ್ತದೆಯೇ ಇದೊಂದು ದೇಶದ ಸೇವೆಗೆ ಜೊತೆಗೆ ಯುವಕರಲ್ಲಿ ಆರ್ಥಿಕ ಬಲವನ್ನು ತುಂಬುವ ಮಹತ್ವದ ಯೋಜನೆಯಾಗಿದೆ ಎಂದರು.

ಇಂತಹ ಬಹುದೊಡ್ಡ ಮಹತ್ವದ ಯುವಕರಿಗೆ ಆಸರೆಯಾಗಿರುವ ದೇಶದ ಪ್ರೇಮ ಬೆಳೆಸುವ ಯೋಜನೆಯನ್ನು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದು, ಸರಿಯಲ್ಲ. ಅವರು ಯುವಜನತೆಯ ಕ್ಷಮೆ ಕೇಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಋಷಿಕೇಶ್ ಪೈ, ಶ್ರೀನಿವಾಸ್ ರೆಡ್ಡಿ, ಕೆ.ವಿ.ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post