ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಷ್ಟಿಯ ಸ್ವಾತಂತ್ರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವ ಭಾರತ ದೇಶಕ್ಕೆ, ಸಂವಿಧಾನ ಹೆಚ್ಚು ಬಲ ನೀಡಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಹೇಳಿದರು.
ಗುರುವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಸಂವಿಧಾನವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡುವ ಮೂಲಕ, ಸಮಾನತೆಯಿಂದ ಬಾಳುವ ಅವಕಾಶ ಮಾಡಿಕೊಟ್ಟಿದೆ. ಅದರೇ ಆಳುವವರ ಕಾಳಜಿಯ ಕೊರತೆಯಿಂದ ಇಂದಿಗೂ ಉಳ್ಳವರು ಮತ್ತು ಬಡವರ ನಡುವಿನ ಸಮಾನತೆಯ ಕೊರತೆಯಿದೆ. ಹಾಗಾಗಿಯೇ ಉತ್ತಮ ಆಡಳಿತಗಾರರನ್ನು ಆರಿಸುವ ಜವಾಬ್ದಾರಿ ಪ್ರಜ್ಞಾವಂತ ನಾಗರೀಕರಾದ ನಮ್ಮ ಮೇಲಿದೆ.
Also read: ಉನ್ನತ ಶಿಕ್ಷಣದಿಂದ ಹಿಂಸಾಪ್ರವೃತ್ತಿ ನಿಯಂತ್ರಣ ಸಾಧ್ಯ: ಪ್ರೊ. ವೀರಭದ್ರಪ್ಪ
ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಪ್ರತಿಯೊಬ್ಬ ನಾಗರೀಕನಿಗೆ ಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ಮತದಾರರ ಪಾತ್ರ ಮಹತ್ವ. ಮತದಾನದ ಪ್ರಕ್ರಿಯೆಯಲ್ಲಿ ನೀರಸ ಪ್ರತಿಕ್ರಿಯೆ ತೋರುವುದು ಒಬ್ಬ ಉತ್ತಮ ಆಡಳಿತಗಾರರನ್ನು ಪಡೆಯುವಲ್ಲಿ ನಾವೇ ಮಾಡಿಕೊಂಡ ಅನ್ಯಾಯ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಎನ್ಇಎಸ್ ಉಪಾಧ್ಯಕ್ಷರಾದ ಸಿ.ಆರ್. ನಾಗರಾಜ ಮಾತನಾಡಿ, ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದ್ದು, ಅಂತಹ ಆಲೋಚನೆಗಳತ್ತ ಶಿಕ್ಷಕರು ಪ್ರೇರಣೆ ನೀಡಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಸಹಾಯಕ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಅಜೀವ ಸದಸ್ಯರಾದ ಆನಂದ, ಜಗದೀಶ್, ರಘು ಸೇರಿದಂತೆ ವಿವಿಧ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಸ್ವಾಗತಿಸಿ, ಶಿಕ್ಷಕ ಇಮ್ತಿಯಾಜ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post