ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಜನ ತತ್ತರಿಸಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕೊರೋನಾ ಖರ್ಚು-ಲೆಕ್ಕ ಕೊಡಿ ಅಂಚೆ ಪತ್ರ ಚಳುವಳಿಯನ್ನು ಜಿಲ್ಲಾ ಯುವ ಕಾಂಗ್ರೆಸ್ ಆರಂಭಿಸಿದೆ.
ಕೊರೋನಾ ಸಂದರ್ಭದಲ್ಲಿ ಖರೀದಿ ಮಾಡಿದ ವೈದ್ಯಕೀಯ ಪರಿಕರಗಳಾದ ವೆಂಟಿಲೇರ್ಟ, ಮಾಸ್ಕ್, ಪಿಪಿಇ ಕಿಟ್‌ಸ, ಕೊರೋನಾ ಸೊಂಕಿತರಿಗಾಗಿ ಬಳಸುವ ಬೆಡ್ ಗಳು , ಆಹಾರದ ಕಿಟ್ ಹಾಗೂ ಇನ್ನಿತರ ಸರ್ಜಿಕಲ್ ಪರಿಕರಗಳನ್ನು ಮಾರುಕಟ್ಟೆಯ ಬೆಲೆಗಿಂತ ಮೂರು- ನಾಲ್ಕು ಪಟ್ಟು ಹೆಚ್ಚು ಹಣವನ್ನು ಕೊಟ್ಟು ಖರೀದಿಸುತ್ತಿದೆ ಹಾಗೂ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಕೊಟ್ಟಂತಹ ಆಹಾರದ ಕಿಟ್’ಗಳಿಗೆ ಸರ್ಕಾರ ನಾವೇ ಖರೀದಿಸಿದ್ದೇವೆ ಎಂದು ಸುಳ್ಳು ಲೆಕ್ಕವನ್ನು ನೀಡುತ್ತಿದೆ ಎಂದು ಯುವ ಕಾಂಗ್ರೆಸ್ ದೂರಿದೆ.
ದಿನನಿತ್ಯ ಒಬ್ಬೊಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದು ಹಾಗೂ ರಾಜ್ಯದ ಜನರಲ್ಲಿ ಅನುಮಾನ ಮೂಡಿದೆ ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಶ್ವೇತ ಪತ್ರ ಹೊರಡಿಸಿ ರಾಜ್ಯದ ಜನತೆಗೆ ಕರೋನ ಖರ್ಚಿನ ಲೆಕ್ಕವನ್ನು ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿನೂತನ ರೀತಿಯಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್ , ಶಿವಮೊಗ್ಗ ನಗರ ಅಧ್ಯಕ್ಷ ಎಚ್.ಪಿ. ಗಿರೀಶ್ , ರಾಜ್ಯ ಕಾರ್ಯದರ್ಶಿ ಟಿವಿ ರಂಜಿತ್, ಗ್ರಾಮಾಂತರ ಅಧ್ಯಕ್ಷ ಇಟಿ ನಿತಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ಲೋಕೇಶ್, ಚಂದ್ರು ಗೆಡ್ಡೆ , ತಂಗರಾಜ್, ಎಂ.ಎಲ್. ಮುರುಳಿ, ನದೀಮ್, ಮಸ್ತಾನ್, ದೇವರಾಜ್, ಜಮಿಲ್, ರಾಜೀವ್ ರಾಯ್ಕರ್, ಕುಮಾರ್, ಎಂ. ರಾಕೇಶ್, ಕ್ಲೆಮೆಂಟ್ ಅಭಿಷೇಕ್, ಸೂರ್ಯ, ಶ್ರೇಯಸ್, ಗಣೇಶ್ ಹಾಗೂ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
Get In Touch With Us info@kalpa.news Whatsapp: 9481252093
















