ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೌಲ್ಯಾಧಾರಿತ ರಾಜಕಾರಣದಿಂದ ದೇಶದ ಉದ್ಧಾರ ಸಾಧ್ಯ, ದೇಶಕ್ಕೆ ಇದರ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿ DH Shankaramurthy ಅಭಿಪ್ರಾಯಿಸಿದರು.
ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬೆಳಗ್ಗೆ ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ನಡೆದ ಶ್ರಮದಿಂದ ಸಾರ್ಥಕತೆಯಡೆಗೆ ವಿಚಾರಗೋಷ್ಠಿಯಲ್ಲಿ ಮೌಲ್ಯಾಧಾರಿತ ರಾಜಕಾರಣ ವಿಷಯ ಕುರಿತು ಅವರು ಮಾತನಾಡಿದರು.

Also read: ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ
ರುದ್ರೇಗೌಡರು ರಾಜಕಾರಣಿಯಾಗಿ, ಕೈಗಾರಿಕೋದ್ಯಮಿಯಾಗಿ, ಸಮಾಜ ಸೇವಕರಾಗಿ ನಿಷ್ಕಳಂಕ ವ್ಯಕ್ತಿ. ಜೀವನದಲ್ಲಿ ಉತ್ತಮ ಆದರ್ಶಗಳೊಂದಿಗೆ ಮುನ್ನಡೆದಿದ್ದಾರೆ. ಇಂತಹ ವಿಶೇಷ ವ್ಯಕ್ತಿಯನ್ನು ನಾಗರಿಕರು ಮುಂದೆ ತಂದು ಅಂತಹವರನ್ನು ಹೆಚ್ಚು ಸೃಷ್ಟಿ ಮಾಡಲು ಕಾರಣರಾಗಬೇಕು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post