ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್‍ನವರಿಗೆ ಸಂಸ್ಕøತಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ S Dattatri ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ Minister Shivaraj Thangadagi ಸೇರಿದಂತೆ ಕಾಂಗ್ರೆಸ್‍ನ ನಾಯಕರುಗಳು ಮೋದಿಯನ್ನು ಟೀಕಿಸುವ ಭರದಲ್ಲಿ ಸಂಸ್ಕೃತಿಯನ್ನೇ ಮರೆತ್ತಿದ್ದಾರೆ. ಶಿವರಾಜ್ ತಂಗಡಗಿ ಉದ್ಯೋಗ ಸೃಷ್ಠಿಯ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ Modi ಅವರು ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಮೋದಿಗೆ ಜೈಕಾರ ಹಾಕಿದವರಿಗೆ ಕಪಾಳ ಮೋಕ್ಷ ಮಾಡಬೇಕು ಎಂದು ಹೀನಾಯವಾಗಿ ಹೇಳಿದ್ದಾರೆ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.

Also read: Karnataka taking steps to ensure adequate power supply during peak summer demand: K.J George
ಇದರಂತೆ ಕಾಂಗ್ರೆಸ್ ಮುಖಂಡರುಗಳಾದ ರಾಹುಲ್‍ಗಾಂಧಿ, Rahul Gandhi ಡಿ.ಕೆ. ಶಿವಕುಮಾರ್, D K Shivakumar ಮಲ್ಲಿಕಾರ್ಜುನ ಖರ್ಗೆ, Mallikarjuna Kharge ಪ್ರಿಯಾಂಕ ಖರ್ಗೆ ಕೂಡ ಮೋದಿ ಅವರನ್ನು ಸಾವಿನ ವ್ಯಾಪಾರಿ, ವಿಷಸರ್ಪ, ಚೋರ್‍ಗುರು ಎಂದೇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಈ ನಾಯಕರುಗಳ ಹೀನ ಸಂಸ್ಕೃತಿ ಆಗಿದೆ ಎಂದರು.

ಲಕ್ಷಾಂತರ ಮಂದಿಗೆ ಉದ್ಯೋಗ ಸಿಕ್ಕಿದೆ. ಅವರ ಯೋಜನೆಗಳು ಜಗತ್ತಿನ ಗಮನ ಸೆಳೆದಿದೆ. ಮೋದಿ ಇಲ್ಲದಿದ್ದರೆ ಲಕ್ಷಾಂತರ ಜನರು ಸತ್ತು ಹೋಗುತ್ತಿದ್ದರು. ಅವರು ಇರುವುದುರಿಂದಲೇ ಬಡತನದಿಂದಾಗಲಿ, ಹಸಿವಿನಿಂದಾಗಲಿ ಒಬ್ಬ ವ್ಯಕ್ತಿಯೂ ಸತ್ತು ಹೋಗಿಲ್ಲ. ಹೀಗೆ ಯುವಕರು, ರೈತರು, ಮಹಿಳೆಯರು, ಕಾರ್ಮಿಕರಿಗಾಗಿ ಅವರು ದುಡಿಯುತ್ತಲೇ ಇದ್ದಾರೆ. ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಇದ್ದರೆ ಮಾತ್ರ ಇವೆಲ್ಲ ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೃಷಿಕೇಶ್ ಪೈ, ವಿನ್ಸಂಟ್ ರೋಡ್ರಿಗ್ರಸ್ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post