ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಸೈಬರ್ ಕ್ರೈಂ #Cyber Crime ಪೊಲೀಸರು ಕಳುವಾಗಿದ್ದ 12.10ಲಕ್ಷ ರೂ., ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಏ.1ರಂದು ಮೂಲ ಮಾಲೀಕರಿಗೆ ಅವರವರ ಮೊಬೈಲ್‍ಗಳನ್ನು ಹಿಂದಿರುಗಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಎಸ್ ಪಿ ಮಿಥುನ್ ಕುಮಾರ್, #SP Mithun kumar ಸೈಬರ್ ಕ್ರೈಂ ಸಿಬ್ಬಂದಿಗಳನ್ನೊಳಗೊಂಡ ಸಿಇಐಆರ್ ಪೋರ್ಟಲ್ ನಲ್ಲಿ ಪತ್ತೆಯಾದ ಮೊಬೈಲ್‍ಗಳು ಇವಾಗಿವೆ ಎಂದರು
ಈವರೆಗೆ ಈ ಪೋರ್ಟಲ್ ಮೂಲಕ 500ಕ್ಕೂ ಹೆಚ್ಚಿನ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆಹಚ್ಚಿದ ಪೊಲೀಸರಿಗೆ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದರು.
Also read: ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ: ರಘುಪತಿ ಭಟ್, ಶಾರದಾ ಪೂರ್‍ಯಾನಾಯ್ಕ್
ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡದೇ ತಾವೇ ಸ್ವತಃ ASP ಅಪ್ಲಿಕೇಷನ್‍ನ ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಅಲ್ಲಿ ಅರ್ಜಿ ತುಂಬಿ ಅಗತ್ಯ ವಿವರಗಳನ್ನು ದಾಖಲಿಸಿದರೆ ದೂರು ದಾಖಲಾದ 24 ಗಂಟೆಯೊಳಗೆ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಆಗ ಮೊಬೈಲ್ ದುರ್ಬಳಕೆಯಾಗುವುದಿಲ್ಲ. ಆಗ ಮೊಬೈಲ್ ಬಳಸಲು ಪ್ರಯತ್ನಿಸಿದಲ್ಲಿ ಅದರ ವಿವರ ಪೊಲೀಸರಿಗೆ ಸಿಗುತ್ತದೆ. ಸುಲಭವಾಗಿ ಇದರಿಂದ ಮೊಬೈಲ್ ಕಳ್ಳತನ ಪತ್ತೆಹಚ್ಚಬಹುದು ಎಂದರು.
ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ನಿರೀಕ್ಷಕ ಜೆ.ಎಸ್. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸೈಬರ್ ಕ್ರೈಂ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post