ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಾಸರು ನೀಡಿದ ಸಾಹಿತ್ಯ ರತ್ನವನ್ನು ನಾವುಗಳೆಲ್ಲಾ ಹಂಚುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಗೀತ ಸಂಯೋಜಕರು, ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು.
ಇಂದು ನಗರದ ಸಾಗರ ರಸ್ತೆಯಲ್ಲಿರುವ ಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದಲ್ಲಿ, ಸಂಗೀತ್ ಸಮರ್ಪಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸುಗಮ ಸಂಗೀತ Sugama Sangeetha ಹಾಗೂ ದಾಸರ ಪದಗಳ Dasarapada ಕಲಿಕಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದಾದ್ಯಂತ ದಾಸ ಸಾಹಿತ್ಯದ ಕಂಪನ್ನು ಪಸರಿಸುತ್ತಿರುವ ನಮ್ಮ ನಾಡಿನ ಪ್ರಖ್ಯಾತ ಗಾಯಕರನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ. ದಾಸರ ಭಕ್ತರಾದ ನಾವುಗಳು, ಪರಮಾತ್ಮನನ್ನು, ದಾಸರನ್ನು, ಗುರುಗಳನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ದಾಸರು ಎಂದು ಹೇಳಿದರೆ ದೀಕ್ಷೆ ಪಡೆದವರಾಗಿದ್ದು, ಅವರ ಅನುಯಾಯಿಗಳಾಗಿ ನಾವಿದ್ದೇವೆ. ಆಧ್ಯಾತ್ಮದ ಚಿಂತನೆಯಲ್ಲಿ ಪರಮಾತ್ಮನನ್ನು ಕಾಣುತ್ತೇವೆ. ವಚನಕಾರರು, ಶರಣರು, ಮಧ್ವಾಚಾರ್ಯರು ತೋರಿದ ದಾರಿಯಲ್ಲಿ, ಭಗವಂತನನ್ನು ಕಾಣುವ ದಾರಿಯಲ್ಲಿ ಮಧ್ವಾಚಾರ್ಯರ ಸಿದ್ಧಾಂತದ ಮೇಲೆ ದಾಸರ ಪದಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
Also read: ರಾಮಮಂದಿರಕ್ಕೆ 24×7 ಹೈಟೆಕ್ ರಕ್ಷಣಾ ಕವಚ | ಕಂಡು ಕೇಳರಿಯದ ಭದ್ರತೆ ಹೇಗಿದೆ ಗೊತ್ತಾ?
ಸುಲಭವಾದ ದಾಸ ಸಾಹಿತ್ಯ ಎಲ್ಲರಿಗೂ ವಿಚಾರಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದ್ದು, ಪ್ರಸ್ತುತ 280 ರ ದಾಸರು ಇಂದು ಇದ್ದಾರೆ. ದಾಸರ ಪದಗಳು ಹೇಗೆ, ಏಕೆ ಬಂತು ಎಂಬುದು ಕೂಡ ಮುಖ್ಯವಾಗುತ್ತದೆ. ನಾವು ಹೇಗೆ ಬದುಕಬೇಕು ಎಂಬುದು ದಾಸ ಸಾಹಿತ್ಯದಲ್ಲಿದೆ. ನಮ್ಮ ಒಳ ಅರ್ಥ, ಹೊರ ಅರ್ಥ, ಗೂಢಾರ್ಥಗಳನ್ನು ತಿಳಿಸುವುದೇ ದಾಸ ಸಾಹಿತ್ಯ ಹಾಗೂ ದಾಸ ಪದಗಳ ಮೂಲ ಉದ್ದೇಶವಾಗಿದ್ದು, ಈ ದಾಸ ಸಾಹಿತ್ಯ ನಮಗೆ ಗೊತ್ತಿಲ್ಲದೇ ನಮ್ಮ ಜೀವನದ ಮೆಟ್ಟಿಲುಗಳನ್ನು ಏರಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ನಾವು ಇದರಲ್ಲಿ ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಶಿಬಿರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ನಾಡಿನ ಹಿರಿಯ ತಬಲ ವಾದಕ ಪಂ. ತುಕರಾಮ್ ರಂಗಧೋಳ್, ಎಲ್ಲರೂ ಒಂದಾಗಿ ನಮ್ಮ ಮನಸ್ಸನ್ನು ಪ್ರಥಮ ಭಾವ ಶುದ್ಧ ರಾಗ ಹಾಡಿದಾಗ ಬ್ರಹ್ಮರಸ ಬ್ರಹ್ಮ ರಾಗ ತಿಳಿಯಲು ಸಹಕಾರಿಯಾಗುತ್ತದೆ. ನಮ್ಮ ಜನ್ಮ ಸಾರ್ಥಕಗೊಳಿಸಿಕೊಳ್ಳಲು ಈ ಭಕ್ತಿ ಮಾರ್ಗ ಸಹಕಾರಿಯಾಗಿರುತ್ತದೆ ಎಂದರು. ಕಲಿಯುವುದು ಬಹಳಷ್ಟಿರುತ್ತದೆ. ಕಲಿಕೆ ಎಂಬುದು ಮುಗಿಯದ ಕೃಷಿಯಾಗಿದ್ದು, ಭಾವ ಶುದ್ಧಿಯಿಂದ ಇಂತಹ ಶಿಬಿರದಲ್ಲಿ ಭಾಗವಹಿಸಿರುವುದೇ ನಮ್ಮ ಪುಣ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯೋಗ ಮತ್ತು ಆಧ್ಯಾತ್ಮ ಚಿಂತಕರಾದ ಶಬರೀಶ್ ಕಣ್ಣನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ್ ಸಮರ್ಪಣ್ ಟ್ರಸ್ಟ್ ಅಧ್ಯಕ್ಷರಾದ ಸುರೇಖಾ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿನಯ್ ಸ್ವಾಗತ ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post