ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ವೈಭವದ ಶಿವಮೊಗ್ಗ ದಸರಾದಲ್ಲಿ #Shivamogga Dasara ಅಂಬಾರಿ ಹೊರುವ ಆನೆಗಳು ನಿನ್ನೆ ನಗರಕ್ಕೆ ಆಗಮಿಸಿದ್ದು, ಇಂದಿನಿಂದ ತಾಲೀಮು ಆರಂಭಗೊಂಡಿದೆ.
ಶಿವಮೊಗ್ಗ ದಸರಾ ಮೆರಣಿಗೆಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲಿನಿಂದ ನಿನ್ನೆ ಮೂರು ಆನೆಗಳನ್ನು ನಗರಕ್ಕೆ ಕರೆತರಲಾಯಿತು.

ಆನಂತರ, ಆನೆಗಳಲ್ಲಿ ವಾಸವಿ ಶಾಲೆಯ ಆವರಣದಲ್ಲಿ ಇರಿಸಲಾಗಿದ್ದು, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಿಬ್ಬಂದಿಗಳಿಗೂ ಸಹ ವ್ಯವಸ್ಥೆ ಮಾಡಲಾಗಿದೆ. ಇವುಗಳನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಇನ್ನು, ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೂರು ಆನೆಗಳ ತಾಲೀಮು ನಗರದಲ್ಲಿ ಇಂದಿನಿಂದ ಆರಂಭಗೊಂಡಿದೆ.
ಕೋಟೆ ಶ್ರೀಸೀತಾರಾಮಾಂಜನೇಯ ದೇವಾಲಯದಿಂದ ಆರಂಭಗೊಂಡ ಮೂರು ಆನೆಗಳ ತಾಲೀಮು ಎಸ್’ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ ಮಾರ್ಗಗಳಲ್ಲಿ ಸಂಚರಿಸಿತು.
ಮಾರ್ಗದಾದ್ಯಂತ ಆನೆಗಳನ್ನು ನೋಡಲು ಜನರು ನೆರೆದಿದ್ದು, ಫೋಟೋ ಹಾಗೂ ವೀಡಿಯೋ ಮಾಡಿಕೊಳ್ಳುತ್ತಿದ್ದುದು ಕಂಡುಬAದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

























Discussion about this post