ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ದಸರಾ #Mysore Dasara ಬಿಟ್ಟರೆ ಶಿವಮೊಗ್ಗ ದಸರಾ #Shivamogga Dasara ಎರಡನೇ ವೈವಿಧ್ಯಮಯ ಅತಿ ದೊಡ್ಡ ದಸರಾವಾಗಿದ್ದು, ಈ ದಸರಾದಲ್ಲಿ ಅಮೂಲ್ಯ ಪ್ರತಿಭೆಗಳು ಮತ್ತು ಕಲಾವಿದರುಗಳಿಗೆ ಸನ್ಮಾನಿಸುತ್ತಿರುವುದು ಮತ್ತು ಅವರ ಪ್ರತಿಭೆ ಹೊರಹೊಮ್ಮಲು ವೇದಿಕೆ ಕಲ್ಪಿಸುತ್ತಿರುವುದು ವಿಶೇಷ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ #SPMithun Kumar ಹೇಳಿದ್ದಾರೆ.
ಅವರು ಇಂದು ನಗರದ ಶಿವಪ್ಪನಾಯಕ ಅರಮನೆಯಲ್ಲಿ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಲಾ ದಸರಾ ಛಾಯಾಚಿತ್ರ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಗೊಂಬೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಶಿವಮೊಗ್ಗದಲ್ಲಿ ಅರ್ಥಪೂರ್ಣ ದಸರಾ ಆಚರಿಸಲಾಗುತ್ತಿದೆ. ಇದು ಸಾಂಸ್ಕೃತಿಕ ನಗರಿಯಾಗಿದ್ದು, ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸಿ ಕೇಂದ್ರ ಮಾಡುವ ದೃಷ್ಟಿಯಿಂದ ಜಿಲ್ಲಾ ಟೂರಿಸಂ ಕೌನ್ಸಿಲ್ ನಿಂದ ಸೆ. 27ರಂದು ಕುವೆಂಪು ರಂಗಮಂದಿರದಲ್ಲಿ ಟೂರಿಸಂ ಡೇ ಎಂದು ಆಚರಿಸಲಾಗುತ್ತಿದ್ದು, ಜಿಲ್ಲೆಯ ಪ್ರತಿಭಾನ್ವಿತ ಛಾಯಾಗ್ರಾಹಕರಿಂದ ಛಾಯಾಚಿತ್ರ ಪ್ರದರ್ಶನ ಮತ್ತು ಈ ಕುರಿತು ಏರ್ಪಡಿಸಿದ ವಿವಿಧ ಪ್ರವಾಸಿ ತಾಣಗಳ ಛಾಯಾ ಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುವುದು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪ್ರತಿ ಬಾರಿ ಕಲಾ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಕಲಾವಿದರು ಶಾಶ್ವತ ನೆಲೆ ಬಗ್ಗೆ ಬೇಡಿಕೆ ಇಡುತ್ತಾರೆ. ಈ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳು ಇದ್ದಾರೆ. ಅವರೂ ಕೂಡ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಸಹಕಾರ ನೀಡಲು ಒಪ್ಪಿದ್ದಾರೆ. ಸಂಘದ ವತಿಯಿಂದ ಪ್ರಯತ್ನ ಮುಂದುವರೆಸಬೇಕು. ನಮ್ಮ ಸಹಕಾರವಿದೆ ಎಂದರು.

ವೇದಿಕೆಯಲ್ಲಿ ಶೇಖರ್ ಗೌಳೇರ್, ಅಬ್ದುಲ್ ಮುಜೀಬ್, ಪ್ರಭು, ರಾಧಿಕಾ ಜಗದೀಶ್, ಮುರಳೀಧರ್, ಆಯುಕ್ತ ಮಾಯಣ್ಣಗೌಡ, ಉಪ ಆಯುಕ್ತ ತುಷಾರ್ ಹೊಸೂರ್, ಕಲಾ ದಸರಾ ತಂಡದ ಕಾರ್ಯದರ್ಶಿ ವಸಂತಕುಮಾರಿ ಇದ್ದರು.
ವಿವಿಧ ಕಲಾವಿದರಿಂದ ಗೊಂಚೆ ಪ್ರದರ್ಶನ ಮತ್ತು ಛಾಯಾಚಿತ್ರ ಪ್ರದರ್ಶನ ಆಕರ್ಷಣೀಯವಾಗಿದ್ದು, ಜಿಲ್ಲಾಧಿಕಾರಿಗಳು ಕುಂಚದಿAದ ಚಿತ್ರ ಬಿಡಿಸುವುದರ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























Discussion about this post