ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಆವರಣದಲ್ಲಿ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪ್ರತಿ ವರ್ಷದಂತೆ ಅ.22 ರ ಭಾನುವಾರ ಸಂಜೆ 5ರಿಂದ ಕವಿಗೋಷ್ಟಿ ನಡೆಯಲಿದೆ. ಪೂಜ್ಯ ಶ್ರೀ ಪ್ರಸನ್ನನಾಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕವಿಗಳು, ಸಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕೆ. ಎಸ್. ಗಂಗಾಧರ ಉದ್ಘಾಟಿಸಲಿದ್ದಾರೆ.

ಕವಿಗಳಾದ ನಾಗರಕೊಡಿಗೆ ಗಣೇಶ್ ಮೂರ್ತಿ, ಅನಿತಾ ಕೃಷ್ಣ, ಭದ್ರಾವತಿ ಉಮರ್ ಕೋಯಾ, ರಿಪ್ಪನ್ ಪೇಟೆ ಮಂಜುನಾಥ ಕಾಮತ್, ಡಾ. ಕೆ. ಎನ್. ಗುರುದತ್, ಕುವೆಂಪು ವಿ.ವಿ. ಮಧು ಗಾಜನೂರು, ಬಿ. ಟಿ. ಅಂಬಿಕಾ, ಕು. ರಾಧಾ, ಡಾ. ಹಸೀನಾ, ನಳಿನಾ ಬಾಲಸುಬ್ರಹ್ಮಣ್ಯಂ, ಯೋಗೇಂದ್ರ, ಕು. ಗೌರಿ ಹಚ್. ಓ., ಬಸವನಗೌಡ ಹೆಬ್ಬಳಗೆ, ಪ್ರೊ ಸತ್ಯನಾರಾಯಣ, ಭಾರತಿ, ರಂಜಿತಾ ಚೇತನ್, ಶೈಲಜಾ, ರವಿಕುಮಾರ್ ಕೆ. ಎಂ., ಸಾಗರ ಎಸ್. ಕೆ. ವಾಣಿ, ಸಾಗರ ಸುಲೋಚನಾ, ನಾಗೇಶ್ ರಾವ್ ಕವನ ವಾಚಿಸಲಿದ್ದಾರೆ. ಸಹೃದಯಿ ಕನ್ನಡ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಿ. ಮಂಜುನಾಥ ವಿನಂತಿಸಿದ್ದಾರೆ.



















