ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿರುವ ಶಿವಮೊಗ್ಗ ದಸರಾ-2026ರ (Shivamogga Dasara) ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳ ಅಂಗವಾಗಿ ಖ್ಯಾತ ಗಾಯಕಿ ಸುರೇಖಾ ಹೆಗಡೆ ಅವರ ನೇತೃತ್ವದಲ್ಲಿ ಸಂಗೀತ ಸೀಮೋಲ್ಲಂಘನ ಕಾರ್ಯಕ್ರಮ ಅ.21ರಂದು ನಗರದ ಫ್ರೀಡಂ ಪಾರ್ಕ್ನ (Freedom Park) ಶ್ರೀ ಅಲ್ಲಮಪ್ರಭು ಬಯಲು ಮೈದಾನದಲ್ಲಿ ನಡೆಯಲಿದೆ.
ಸಂಜೆ 3.45ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಬಳಿಕ ವಿವಿಧ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.
55 ಗಾಯಕ-ಗಾಯಕಿಯರಿಂದ ಸಮೂಹ ಗಾಯನ
ಸಂಜೆ 4 ಗಂಟೆಗೆ ಶಿವಮೊಗ್ಗದ 55 ಗಾಯಕ-ಗಾಯಕಿಯರಿಂದ ‘ಸಂಗೀತ ಸ್ವನ’ ಸಮೂಹ ಗಾಯನ ನಡೆಯಲಿದೆ. ನಂತರ 4.20ಕ್ಕೆ ನೃತ್ಯ ನಮನ ಕಾರ್ಯಕ್ರಮ ಜರುಗಲಿದೆ.
ಸಂಜೆ 4.30ಕ್ಕೆ ಶಿವಮೊಗ್ಗದ ಖ್ಯಾತ ವಕೀಲರಿಂದ ‘ವಕೀಲ ಗಾನ ಲಹರಿ’ ವೃಂದ ಗಾಯನ ನಡೆಯಲಿದ್ದು, 4.50ಕ್ಕೆ ವಿಶೇಷ ವಕೀಲರ ಹಾಡಿನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
50 ಶಿಕ್ಷಕರಿಂದ ‘ಶಿಕ್ಷಕ ಸ್ವರ ಮೇಳ’
ಸಂಜೆ 4.55ಕ್ಕೆ ಶಿವಮೊಗ್ಗದ 50 ಶಿಕ್ಷಕರಿಂದ ‘ಶಿಕ್ಷಕ ಸ್ವರ ಮೇಳ’ ಸಮೂಹ ಗಾಯನ ನಡೆಯಲಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶಿಕ್ಷಕರು ಹಾಗೂ ವಕೀಲರ ಸಂಗೀತ ಪ್ರತಿಭೆಯನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
Shivamogga Dasara: ಸುರೇಖಾ ಹೆಗಡೆ ಸೇರಿದಂತೆ ಖ್ಯಾತ ಕಲಾವಿದರ ಗಾಯನ
ಸಂಜೆ 5.30ಕ್ಕೆ ನಡೆಯಲಿರುವ ಮುಖ್ಯ ಆಕರ್ಷಣೆಯ ‘ಸಂಗೀತ ಸೀಮೋಲ್ಲಂಘನ ಸಂಧ್ಯಾ’ ಕಾರ್ಯಕ್ರಮದಲ್ಲಿ ಗಾಯಕಿ ಸುರೇಖಾ ಹೆಗಡೆ ಅವರೊಂದಿಗೆ ಬೆಂಗಳೂರಿನ ಅಜಯ್ ವಾರಿಯರ್, ಉಡುಪಿಯ ಸಂಗೀತಾ ಬಾಲಚಂದ್ರ, ಕಿರಣ್ ಚೆನ್ನಗಿರಿ ಹಾಗೂ ಕು. ಸ್ವರ ಹೆಗಡೆ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ.
Also Read>> ಸೊರಬ ದಸರಾ ಕವಿಗೋಷ್ಠಿಯಲ್ಲಿ ಕವಿತೆಗಳ ಕಲರವ: ಲಲಿತಾ ಎನ್ಗೆ ಪ್ರಥಮ ಬಹುಮಾನ
ಇದೇ ವೇಳೆ ವಿನೂತನ ಪರಿಕಲ್ಪನೆಯಲ್ಲಿ ಯಕ್ಷ ಭಾವ ನೃತ್ಯ ಪ್ರದರ್ಶನ ಕೂಡ ನಡೆಯಲಿದೆ. ಕಾರ್ಯಕ್ರಮವನ್ನು ವಿನಯ್ ಶಿವಮೊಗ್ಗ ನಿರೂಪಿಸಲಿದ್ದಾರೆ.
ಶಿವಮೊಗ್ಗ ದಸರಾ-2026ರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಸಂಗೀತ, ನೃತ್ಯ ಹಾಗೂ ಸಮೂಹ ಗಾಯನದ ಮೂಲಕ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












