ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧೆ ಘೋಷಣೆ ಮಾಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಎಪ್ರಿಲ್ 12ರಂದು ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇಂದು ನಡೆದ ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಪ್ರಿಲ್ 12ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, 25 ಸಾವಿರಕ್ಕೂ ಅಧಿಕ ಬಂಧುಗಳು ನನ್ನೊಂದಿಗೆ ಬೆಂಬಲಕ್ಕೆ ಅಂದು ಹೆಜ್ಜೆ ಹಾಕಿದ್ದಾರೆ ಎಂದರು.
ನೀವು ಬಿಜೆಪಿಯವರು ಅಲ್ಲವೋ ಎಂದು ಇಲ್ಲಿಂದ ನೀವು ಮನೆಗೆ ಹೋದ ತಕ್ಷಣ ನಿಮಗೆ ಕರೆ ಬರುತ್ತದೆ. ಅದೇ ರೀತಿ ಕಾಂಗ್ರೆಸ್ ಹಲವು ಕಾರ್ಯಕರ್ತರೂ ಸಹ ನನ್ನೊಂದಿಗೆ ಓಡಾಡುತ್ತಿದ್ದರು. ಅವರಿಗೂ ಸಹ ಕರೆ ಬಂದಿದೆ. ಇದು ನಿಜಕ್ಕೂ ಆಶ್ಚರ್ಯ ತರಿಸುವ ವಿಚಾರ ಎಂದರು.
ರಾಜ್ಯದಲ್ಲಿ ಬಿಜೆಪಿ 108 ಸ್ಥಾನದಿಂದ 66 ಸ್ಥಾನಕ್ಕೆ ಕುಸಿದಿದ್ದು ಕಾರ್ಯಕರ್ತರಿಂದಲ್ಲ, ಬದಲಾಗಿ ಇಂತಹ ರಾಜ್ಯ ನಾಯಕರಿಂದಲೇ ಎಂದು ಕಿಡಿ ಕಾರಿದರು.
ಶಿಸ್ತಿನಿಂದ ಬೆಳೆದ ನನಗೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಡಿ ಎಂದರು. ಮೂರೇ ನಿಮಿಷದಲ್ಲಿ ಕೇಂದ್ರಕ್ಕೆ ಪತ್ರ ಬರೆದು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದೆ. ಆದರೆ, ಇಂದು ನೂರಾರು ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ. ಆದ ಅನ್ಯಾಯವನ್ನು ಸರಿಪಡಿಸಲು, ಕಾರ್ಯಕರ್ತರ ಒತ್ತಾಯಕ್ಕಾಗಿ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಇಂದು ಸ್ವಾಭಿಮಾನಕ್ಕಾಗಿ ಚುನಾವಣೆಯಲ್ಲಿ ಸ್ಪಧಿಸುತ್ತಿದ್ದು ನನ್ನೊಂದಿಗೆ ಬರುವವರ ಸ್ವಾಭಿಮಾನಿಗಳು ಮಾತ್ರ. ಅವರೊಂದಿಗೆ ಹೋಗುವವರು ಕೂಲಿ ಕಾರ್ಮಿಕರು ಎಂದು ಟಕ್ಕರ್ ನೀಡಿದರು.
Also read: ದೇವಾಲಯದ ರಥದ ಅಡಿಗೆ ಸಿಲುಕಿ ಐದು ವರ್ಷದ ಕಂದಮ್ಮ ದಾರುಣ ಸಾವು
ಅಪ್ಪಮಕ್ಕಳ ವಿರುದ್ಧ ಹಲವು ಕಾರ್ಯಕರ್ತರ ನಮ್ಮ ಬಳಿ ನೋವು ತೋಡಿಕೊಂಡಿದ್ದಾರೆ. ಅವರುಗಳು ವಿಚಿತ್ರ ರಾಜಕಾರಣ ಮಾಡುವವರು ಎಂದು ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಇಂತಹ ಪ್ರವೃತ್ತಿಯಿಂದಲೇ ವಿಧಾನಸಭಾ ಚುನಾವಣೆಯಲ್ಲಿ ಕಷ್ಟಪಟ್ಟೂ ಸಹ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.
ತಾವು ಈಗಾಗಲೇ ಹಲವು ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದು, ಹೋದೆಡೆಯೆಲ್ಲಾ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅವರ ರಾಜಕಾರಣ ನೋಡಿ ಸಾಕಾಗಿದೆ. ನಿಮ್ಮನ್ನೇ ಗೆಲ್ಲಿಸುತ್ತೇವೆ ಎಂಬ ಬಹಳಷ್ಟು ಮತದಾರರು ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post