ಶಿವಮೊಗ್ಗ: ಸಾಲಮನ್ನಾ ಯೋಜನೆಯ ಲಾಭವನ್ನು ಪಡೆಯಲು ರೈತರು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ದಾಖಲೆಗಳನ್ನು ನೀಡುವ ಅಂತಿಮ ದಿನಾಂಕವನ್ನು ಜನವರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು.
ಸಾಲಮನ್ನಾ ಸೌಲಭ್ಯ ಪಡೆಯಬಯಸುವ ರೈತರು ತಮ್ಮ ಬ್ಯಾಂಕ್‌ಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಸರ್ವೇ ಸಂಖ್ಯೆ ಅಥವಾ ಪಹಣಿಯನ್ನು ನೀಡಿ ಸ್ವೀಕೃತಿಯನ್ನು ಪಡೆಯಬೇಕು. ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದ ಬಹುತೇಕ ಎಲ್ಲಾ ರೈತರು ತಮ್ಮ ಮಾಹಿತಿಗಳನ್ನು ಒದಗಿಸಿದ್ದು, ರಾಷ್ಟಿಕೃತ ಬ್ಯಾಂಕುಗಳಲ್ಲಿ ಶೇ.42ರಷ್ಟು ರೈತರು ಮಾತ್ರ ದಾಖಲೆ ಸಲ್ಲಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನಲ್ಲಿ ರೈತರಿಗೆ ಪಹಣಿ ಪಡೆಯಲು ಅನುಕೂಲವಾಗುವಂತೆ ಹೆಚ್ಚುವರಿ ಕೌಂಟರ್ ತೆರೆಯಲಾಗಿದೆ. ರೈತರು ಎಲ್ಲಾ ದಾಖಲೆಗಳನ್ನು ಒದಗಿಸಿದರೆ ಮಾತ್ರ ಋಣಮುಕ್ತ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.







Discussion about this post