ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನು BSc Forestry ಪಡೆದವರಿಗೆ ಮಾತ್ರ ಮೀಸಲಾಗಿಡಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಥಿಗಳು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಸಿ ಅರಣ್ಯಾಶಾಸ್ತ್ರದ ವಿದ್ಯಾರ್ಥಿನಿ ಶ್ರೀನಿಧಿ, ಅರಣ್ಯ ಇಲಾಖೆಯ ಅಧಿಕಾರಿಗಳ ಹುದ್ದೆಗಳಿಗೆ ಬಿಎಸ್ಸಿ ಅರಣ್ಯಾಶಾಸ್ತ್ರವಲ್ಲದೇ ಇತರೆ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳು ಅರ್ಜಿಗಳನ್ನು ಹಾಕಲು ಸರ್ಕಾರ ನಿಗಧಿ ಮಾಡಿದೆ. ಆದರೆ, ಅರಣ್ಯ ಶಾಸ್ತ್ರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಮಾತ್ರ ಮೀಸಲಿಟ್ಟಿದೆ. ಇದು ಸಕಾಗುವುದಿಲ್ಲ. ಈ ಎಲ್ಲಾ ಹುದ್ದೆಗಳನ್ನು ಅರಣ್ಯ ಶಾಸ್ತ್ರ ಪದವೀಧರರಿಗೆ ಮಾತ್ರ ನೀಡಬೇಕು ಎಂದರು.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಜ್ಞಾನವನ್ನು, ತರಬೇತಿಯನ್ನು ನಾವು ಪಡೆದಿರುತ್ತೇವೆ. ವಿಶೇಷವಾದ ಅಧ್ಯಾಯನ ಮಾಡಿರುತ್ತೇವೆ, ಜ್ಞಾನ ಸಂಪಾದನೆ ಮಾಡಿರುತ್ತೇವೆ. ಬೇರೆ ಬೇರೆ ಹುದ್ದೆಗಳಿಗೆ ನೇಮಕ ಮಾಡುವಾಗ ಅದೇ ಹುದ್ದೆಯಲ್ಲಿ ಪದವಿ ಪಡೆದಿರುವವರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ನಮಗೇಕೆ ಹೀಗೆ ಎಂದು ಪ್ರಶ್ನೆ ಮಾಡಿದರು.
Also read: ಶಿವಮೊಗ್ಗ | ಜಿಲ್ಲೆಯ ಈ ಸಮಸ್ಯೆ ಪರಿಹಾರಕ್ಕಾಗಿ ಕೇಳಿಬಂತು ಚುನಾವಣಾ ಬಹಿಷ್ಕಾರದ ಕೂಗು
2018ರಿಂದ 1200ಕ್ಕೂ ಹೆಚ್ಚು ಪದವೀಧರರು ಅರಣ್ಯ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗಾಗಿ ಕಾಯುತ್ತಿದ್ದಾರೆ. ಆದರೆ, ಇದುವರೆಗೂ ನೇಮಕಾತಿ ಮಾಡಿಕೊಂಡಿಲ್ಲ. ಹೀಗೆ ಮುಂದುವರೆದರೆ ಸಾವಿರಾರು ಸಂಖ್ಯೆಯಲ್ಲಿ ಅರಣ್ಯ ಶಾಸ್ತ್ರ ಪದವೀಧರರು
ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಈ ಪದವಿ ಪಡೆದವರಿಗೆ ಈ ವಿಭಾಗದಲ್ಲಿ ಮಾತ್ರ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶ ಇರುತ್ತದೆ. ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಲು ಅವಕಾಶವಿಲ್ಲದಂತೆ ಆಗುತ್ತದೆ. ಆದ್ದರಿಂದ ಅರಣ್ಯ ಇಲಾಖೆಯಲ್ಲಿ ಈಗ ಸುಮಾರು 3226 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಅಧಿಕಾರಿ ವರ್ಗದ ಹುದ್ದೆಗಳು ಇವೆ. ಈ ಎಲ್ಲಾ ಹುದ್ದೆಗಳನ್ನು ಬಿ.ಎಸ್ಸಿ. ಅರಣ್ಯ ಶಾಸ್ತ್ರ ಪದವಿ ಪಡೆದವರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಕೇಶ್, ಭೂಮಿಕಾ, ನಾಜ್ಮಿ, ಅರೀಂ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post