ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಣದಿಂದ ವಿಷಯದ ಆಳಕ್ಕಿಳಿದು ಬೇರೆಯವರಿಗೆ ಜ್ಞಾನವನ್ನು ಹರಡುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಶಾಸಕ ಚನ್ನಬಸಪ್ಪ ಕಿವಿ ಮಾತು ಹೇಳಿದರು.
ಮಲ್ಲಿಗೇನಹಳ್ಳಿಯಲ್ಲಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ #KateelAshokPaiCollege ಆಯೋಜಿಸಿರುವ ಶೈಕ್ಷಣಿಕ ವಸ್ತು ಪ್ರದರ್ಶನ ಹಾಗೂ ಅನ್ವೇಷಣಾ ಸಾಂಸ್ಕೃತಿಕ ಪ್ರತಿಭಾ ಸ್ಫರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೆಂಬುದು #Education ವಿದ್ಯಾರ್ಥಿಗಳಲ್ಲಿ ಕೇವಲ ಜ್ಞಾನವನ್ನು ಗಳಿಸುವ ಮಾರ್ಗವಾಗದೇ ಜ್ಞಾನವನ್ನು ಪಸರಿಸುವ ಕೌಶಲ್ಯವನ್ನು ಬೆಳೆಸಬೇಕು ಎಂದು ತಿಳಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳ ಮೂಲಕ ತಾವು ತರಗತಿಗಳಲ್ಲಿ ಪಡೆದ ಜ್ಞಾನವನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸುವ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

Also Read: ಶಿವಮೊಗ್ಗ | ಪಾಲಿಕೆ ಬಜೆಟ್ ಸಲಹೆ ಸಭೆ | ಸಮಸ್ಯೆಗಳ ಬಗ್ಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಸಮಾಜ ಕಾರ್ಯ, ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಕಾಮರ್ಸ್, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಇಂಗ್ಲೀಷ್, ಕನ್ನಡ, ಹಿಂದಿ ಭಾಷಾ ಶಾಸ್ತ್ರಗಳ ಕುರಿತು ತಯಾರಿಸಿದ ಮಾದರಿಗಳನ್ನು ಶಾಸಕರು ವೀಕ್ಷಿಸಿದರು.

ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ ಹಾಗೂ ಎಲ್ಲ ಉಪನ್ಯಾಸಕರು ಈ ವಿಶೇಷ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಸಂಯೋಜಿಸಿದ್ದಾರೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಆಸಕ್ತಿಯಿಂದ ತಾವೇ ತಯಾರಿಸಿದ ಮಾದರಿಗಳ ಮೂಲಕ ವಿವಿಧ ವಿಷಯಗಳನ್ನು ಪ್ರಸ್ತುತಪಡಿಸಿರುವುದು ಕಂಡುಬಂತು.

ಮೊದಲನೇ ದಿನವೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಡಿ.7ರ ನಾಳೆಯೂ ಸಹ ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೂ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶವಿದೆ.
ಮಕ್ಕಳ ಹಕ್ಕು, ಪರೀಕ್ಷಾ ಭಯ ನಿವಾರಣೆ, ಕಂಪ್ಯೂಟರ್ ಕೌತುಕ, ಮೊಬೈಲ್ ಅಡಿಕ್ಷನ್ ನಿವಾರಣೆ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರದ ಉಪಯೋಗ, ಪ್ರಾಣಿ ಲೋಕದ ವಿಷಯಗಳು, ರಸಾಯನಶಾಸ್ತ್ರದ ಬಳಕೆ, ನಮ್ಮ ಇತಿಹಾಸ, ನಮ್ಮ ಭಾಷೆ… ಹೀಗೆ ಕಲಿಯಲು, ತಿಳಿಯಲು ಒಂದು ಅವಕಾಶವನ್ನು ಈ ವಸ್ತು ಪ್ರದರ್ಶನ ಮಾಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post