ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಟ ದರ್ಶನ್ #Darshan ಅವರ `ಡೆವಿಲ್’ #Devil ಸಿನಿಮಾ ಬಿಡುಗಡೆಯಾಗಿದ್ದು, ದರ್ಶನ್ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದ್ದು ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆಯನ್ನು ಮಾಡಿದರು.
ನಿನ್ನೆ ಸಂಜೆಯಿಂದಲೇ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸಾವಿರಾರು ಅಭಿಮಾನಿಗಳು ಸೇರಿ ದರ್ಶನ ಆಳೆತ್ತರದ ಕಟೌಟ್‍ಗಳನ್ನು ಅಳವಡಿಸಿ ಚಿತ್ರಮಂದಿರದ ಸುತ್ತಲೂ ದರ್ಶನ್ ಚಿತ್ರಗಳ ಬೃಹದಾಕಾರದ ಫ್ಲೆಕ್ಸ್‍ಗಳನ್ನು ಅಳವಡಿಸಲಾಗಿತ್ತು. ಅದಕ್ಕೆ ಲೀಟರ್ ಗಟ್ಟಲೆ ಹಾಲಿನ ಅಭಿಷೇಕವನ್ನು ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು. ಡಿಜೆ ಹಾಕಿ ಸ್ಟೆಪ್‍ಹಾಕಿ ಕುಣಿಯುತ್ತಿದ್ದ ಅಭಿಮಾನಿಗಳು ನೆರೆದ ಎಲ್ಲಾ ಸಾರ್ವಜನಿಕರೆಲ್ಲರಿಗೂ ಬಾಡೂಟದ ವ್ಯವಸ್ಥೆ ಮಾಡಿದ್ದರು.
ನಿನ್ನೆ ರಾತ್ರಿ ಇಂದಿನ ಎಲ್ಲಾ ಶೋಗಳ ಟಿಕೇಟ್‍ಗಳು ಮಾರಾಟ ಆಗಿದ್ದವು. ಬೆಳಗಿನ ವಿಶೇಷ ಶೋ 6.30ಕ್ಕೆ ಪ್ರಾರಂಭವಾಗಿತ್ತು. ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಡೆವಿಲ್ ಚಿತ್ರ ರಾಜ್ಯದೆಲ್ಲೆಡೆ ಭರ್ಜರಿ ಶುಭಾರಂಭಗೊಂಡಿದ್ದು ಸಾವಿರಾರು ಅಭಿಮಾನಿಗಳ ಚಿತ್ರಮಂದಿರದ ಬಳಿಯೇ ಇದ್ದು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















