ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸದೃಢ ದೇಶವನ್ನು ಕಟ್ಟುವಲ್ಲಿ ಯುವಕರ ಜವಾಬ್ದಾರಿ ದೊಡ್ಡದಿದ್ದು, ಇಂತಹ ಯುವಕರಿಗೆ ಶಿಸ್ತು ಹಾಗೂ ತ್ಯಾಗ ಮುಖ್ಯವಾದುದು ಎಂದು ಬಿಜಿಎಸ್ ಕಾಲೇಜಿನ ಉಪನ್ಯಾಸಕ ಸಂದೀಪ್ ಶೆಟ್ಟಿ ಅಭಿಪ್ರಾಯಪಟ್ಟರು.
ಪಿಇಎಸ್’ಐಎಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಎನ್‌ಎಸ್‌ಎಸ್‌ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುದರಿಂದ ಶಿಸ್ತು, ಸಮಯಪಾಲನೆ, ನಾಯಕತ್ವ, ಮಾನವೀಯತೆ, ಸಹನೆ, ತ್ಯಾಗ ಮೊದಲಾದ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯ.ಇದರಿಂದಾಗಿ ನಿಮ್ಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ.ಮಾತ್ರವಲ್ಲದೆ ಸದೃಢವಾದ ದೇಶವನ್ನು ಕಟ್ಟುವಲ್ಲಿ ಯುವಕರ ಜವಾಬ್ದಾರಿ ಬಹು ದೊಡ್ಡದು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ. ಸುದರ್ಶನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಿ.ಎಸ್. ರೂಪ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಿ. ಮೋಹನ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ಮಂಜುನಾಥ್, ರಾಸೇಯೋ ಕಾರ್ಯಕ್ರಮಾಧಿಕಾರಿಗಳಾದ ವಿ. ಭವ್ಯ, ಸಹಾಯಕ ಪ್ರಾಧ್ಯಾಪಕರುಗಳಾದ ಎಚ್.ಸಿ. ಸಚ್ಚಿದಾನಂದ, ವಿಷ್ಣು ಬಾಗ್ವೆ, ಎಚ್.ಸಿ. ಅಶ್ವಿನಿ, ಅಧ್ಯಾಪಕ ವೃಂದದವರು ಹಾಗೂ ರಾಸೇಯೋ ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೀಪಿಕ ಸ್ವಾಗತಿಸಿ, ಕೃತ್ತಿಕಾ ವಂದಿಸಿದರು. ನಮ್ರತಾ ಮತ್ತು ತಂಡದವರು ಪ್ರಾರ್ಥಿಸಿ, ಚಿನ್ಮಯಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















Discussion about this post