ಶಿವಮೊಗ್ಗ: ಗ್ರಾಮ ಪಂಚಾಯ್ತಿ ಚುನಾವಣೆಯ ಯಶಸ್ಸಿನ ಬೆನ್ನಲ್ಲೇ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಗರದಲ್ಲಿ ಜ.2-3ರಂದು ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆ ನಡೆದಿದೆ.
25 ವರ್ಷದ ನಂತರ ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯ ರಾಜಕಾರಣದಲ್ಲಿ ಭಾರೀ ಮಹತ್ವವನ್ನು ಪಡೆದುಕೊಂಡಿರುವ ಈ ಸಭೆಗೆ ಇಡಿಯನಗರ ನವವಧುವನಿಂತೆ ಸಿಂಗಾರಗೊಂಡಿದೆ.ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳಲ್ಲಿ ದ್ವಾರ ಕಮಾನುಗಳನ್ನು ಹಾಕಲಾಗಿದ್ದು, ಬಿಜೆಪಿ ಭಾವುಟ ಹಾಗೂ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿವೆ.
ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಹಾಗೂ ಕೇಸರಿ ಭಾವುಟಗಳ ರಾರಾಜಿಸುತ್ತಿದ್ದು, ಮೆಸ್ಕಾಂ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಗೋಪಿ ವೃತ್ತ, ಸರ್ಕ್ಯೂಟ್ ಹೌಸ್ ವೃತ್ತ ಸೇರಿದಂತೆ ಬಹುತೇಕ ಪ್ರಮುಖ ಸ್ಥಳಗಳ ಸಂಪೂರ್ಣ ಕೇಸರಿಮಯವಾಗಿದೆ. ಇದರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬಾವುಟ, ಬಂಟಿಗ್ಸ್ ಹಾಗೂ ಸ್ವಾಗತ ಕೋರುವ ಫ್ಲೆಕ್ಸ್’ಗಳು ರಾರಾಜಿಸುತ್ತಿದ್ದು, ನಗರಕ್ಕೆ ವಿಶೇಷ ಕಳೆ ತಂದಿದೆ.
Discussion about this post