ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಜಾರಿಯಲ್ಲಿದ್ದ ವೇಳೆ ಜಿಲ್ಲೆಯಾದ್ಯಂತ 257 ಪ್ರಕರಣ ದಾಖಲಾಗಿದ್ದು, 656 ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜುಲೈ 24ರ ಇಂದಿನವರೆಗೂ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪತ್ತೆ ಮಾಡಲಾದ ಅಪರಾಧ ಪ್ರಕರಣಗಳ ಕುರಿತಾಗಿ ಸಮಗ್ರವಾಗಿ ಮಾಹಿತಿ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿಗಳು ನೀಡಿದ ಮಾಹಿತಿಗಳು ಹೀಗಿವೆ:
ಲಾಕ್ ಡೌನ್ ಆದೇಶ ಉಲ್ಲಂಘನೆ ಬಗ್ಗೆ 89, ಕ್ವಾರಂಟೈನ್ ಆದೇಶ ಉಲ್ಲಂಘನೆ 11, ಜೂಜಾಟ ಪ್ರಕರಣಗಳು 93 ಹಾಗೂ ಅಕ್ರಮ ಮದ್ಯ ಮಾರಾಟ 64 ಪ್ರಕರಣಗಳು ದಾಖಲಾಗಿವೆ.
ಇನ್ನು, ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದ 10,992 ವಾಹನಗಳ ವಿರುದ್ಧ ಐಎಂವಿ ಕಾಯ್ದೆ ರೀತ್ಯಾ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಪ್ರಕರಣಗಳು:
ಸೀಗೆಹಟ್ಟಿಯಲ್ಲಿ ಆಟೋಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹಾಗೂ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ಬೈಕ್’ಗೆ ಬೆಂಕಿ ಹಚ್ಚಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು, ಮಟ್ಕಾ ಜೂಜಾಟದ 95 ಪ್ರಕರಣಗಳು ದಾಖಲಾಗಿದ್ದು, 116 ಆರೋಪಿಗಳನ್ನು ಬಂಧಿಸಿ, 3,13,671 ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಸ್ಪೀಟು ಜೂಜಾಟದ 158 ಪ್ರಕರಣಗಳು ದಾಖಲಾಗಿದ್ದು, 886 ಆರೋಪಿಗಳನ್ನು ಬಂಧಿಸಿ, 18,70,915 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಎನ್‌ಡಿಪಿಎಸ್’ಗೆ ಸಂಬಂಧಿಸಿದಂತೆ 26 ಪ್ರಕರಣಗಳು ದಾಖಲಾಗಿದ್ದು, 54 ಆರೋಪಿಗಳನ್ನು ಬಂಧಿಸಿ 10 ಕೆಜಿ ಗಾಂಜಾ ಹಾಗೂ ಒಂದು ಕೆಜಿ ಹಸಿ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮ ಮದ್ಯ ಮಾರಾಟದ 147 ಪ್ರಕರಣಗಳು ದಾಖಲಾಗಿದ್ದು, 186 ಆರೋಪಿಗಳನ್ನು ಬಂಧಿಸಿ 2,37,920 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳಭಟ್ಟಿಯ 18 ಪ್ರಕರಣ ದಾಖಲಾಗಿದ್ದು, 29 ಆರೋಪಿಗಳನ್ನು ಬಂಧಿಸಿ, 38 ಲೀಟರ್ ಕಳ್ಳಭಟ್ಟಿ, 775 ಲೀಟರ್ ಕಳ್ಳಭಟ್ಟಿ ಕೊಳೆಯನ್ನು ವಶಪಡಿಸಿಕೊಂಡಿದೆ.
ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ವಿನೋಬ ನಗರ ಹಾಗೂ ಜಯನಗರ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 26,110 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ 36,070 ರೂ., ಮಹಿಳಾ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ 7 ಜನರನ್ನು ಬಂಧಿಸಿ 1,30,360 ರೂ. ಹಾಗೂ 7 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಇನ್ನು, ನೋ ಪಾರ್ಕಿಂಗ್’ನ 107 ಹಾಗೂ ಡಿಫೆಕ್ಟಿವ್ ಸೈಲೆನ್ಸರ್’ಗೆ ಸಂಬಂಧಿಸಿದಂತೆ 21 ಪ್ರಕರಣಗಳು ದಾಖಲಾಗಿವೆ.
Get In Touch With Us info@kalpa.news Whatsapp: 9481252093
Discussion about this post