ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಹಾಗೂ ಭಾರತದ ಹಲವು ರಾಜ್ಯಗಳಿಂದ ಸುಮಾರು 350ಕ್ಕಿಂತಲೂ ಹೆಚ್ಚಿನ ವೈದ್ಯರು, ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರನ್ನು ಒಂದೇ ವೇದಿಕೆಯಲ್ಲಿ ತರುವ ವಿನೂತನ ಕಾರ್ಯಕ್ರಮ ವೈದ್ಯರ ಸಮ್ಮೇಳನ ಸೆ.20 ಮತ್ತು 21ರಂದು ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಅಂತರ ರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆಯ ರಾಜ್ಯ ಪ್ರತಿನಿಧಿ ಕಿರಣ್‍ಕುಮಾರ್ ಎಂ.ಡಿ. ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಶಿವಮೊಗ್ಗ ಘಟಕದ ವತಿಯಿಂದ ಸೆ.20ರಂದು ಸರ್ಜಿ ಕನ್ವೆನ್ಷನ್ ಹಾಲ್‍ನಲ್ಲಿ ಬೆಳಿಗ್ಗೆ 9.30ಕ್ಕೆ ಸಮ್ಮೇಳನ ಹಾಗೂ 21ರಂದು ಸಿಗಂಧೂರು ಮತ್ತು ಜೋಗಕ್ಕೆ ನೆಟ್ವರ್ಕಿಂಗ್ ಟ್ರಿಪ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವೈದ್ಯರು ತಮ್ಮ ಕ್ಲಿನಿಕಲ್ ಪ್ರಾಕ್ಟಿಸ್‍ಗಿಂತಲೂ ಮುಂದೆ ಹೋಗಿ ಉದ್ಯಮಿಗಳಾಗಲು, ಹೊಸ ಕಾಲದ ವೈಧ್ಯಕೀಯ ಸೇವಾ ಅಗತ್ಯಗಳು ಹಾಗೂ ಆರೋಗ್ಯ ಸೇವೆಗಳಲ್ಲಿ ಬೇಕಾದ ನೂತನ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡಿ ಹೆಚ್ಚಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವಂತೆ ಮಾಡಲು ಹಾಗೂ ತಮ್ಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಜಿಗಿಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಹಲವು ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಜಗತ್ತಿನ ಎಲ್ಲೆಡೆಯಿಂದ ಶೋಧಿಸಿ ಕ್ಷಿಪ್ರವಾಗಿ ಒದಗಿಸುವ ಎಐ ಒಳನೋಟಗಳು, ಹಾಸ್ಪಿಟಲ್ ವಿಸ್ತರಣೆ, ಸಂಪನ್ಮೂಲ ಕ್ರೋಢೀಕರಣ, ಸಂಪತ್ತಿನ ಸೃಷ್ಟಿ, ಮತ್ತು ನೂತನ ಡಿಜಿಟಲ್ ಹೆಲ್ತ್ ಕೇರ್‍ನ ಸಾಧಕ ಬಾಧಕಗಳ ಬಗ್ಗೆ ವಿಶೇಷ ಚರ್ಚೆಗಳಿಗೆ ಈ ಸಮಾವೇಶ ಸಾಕ್ಷಿಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸ್ಕಿಲ್ ಡೆವಲಪ್ಟೆಂಟ್ ಖಾತೆಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆಯ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದ ಶಾಸಕರು ಚನ್ನಬಸಪ್ಪ ಎಸ್.ಎನ್., ಶಿವಮೊಗ್ಗದ ವಿಧಾನ ಪರಿಷತ್ ಶಾಸಕ ಧನಂಜಯ ಸರ್ಜಿ, ಚಿತ್ರದುರ್ಗದ ವಿಧಾನ ಪರಿಷತ್ ಶಾಸಕ ನವೀನ್ ಕೊಟ್ಟಿಗೆ, ಟ್ರಸ್ಟ್‍ನ ಅಧ್ಯಕ್ಷ ಸಂತೋಷ್ ಕೆಂಚಾಂಬ ಮತ್ತಿತರರು ಉಪಸ್ಥಿತರಿರುವರು ಎಂದರು.
ಈ ಸಮಾವೇಶದ ಸಂಯೋಜಕರಾಗಿ ಡಾ. ಶಾಲಿನಿ ನಲ್ವಾಡ್ (ಕೋ ಫೌಂಡರ್, ಏರ್ ಅಂಬುಲೆನ್ಸ್), ಡಾ. ಧನಂಜಯ ಸರ್ಜಿ (ಒಐಅ & ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್) ಹಾಗೂ iಐಙಈ ಟ್ರಸ್ಟಿನ ಟ್ರಸ್ಟಿಗಳು ಹಾಗೂ ಸದಸ್ಯರು ಭಾಗವಹಿಸುವರು. ಡಾ. ನಾಗೇಂದ್ರ ಸ್ವಾಮಿ (ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್), ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಡಾ. ಧನಂಜಯ್ ಅರೋರ (ಬ್ರಾಂಡ್ ಮ್ಯಾನೇಜೆಂಟ್ ಎಕ್ಸ್‍ರ್ಟ್ & ಖಿಇಆx ಸ್ಪೀಕರ್), ಡಾ. ಸುರೇಶ್ ಬಾಡಮಠ (ಪ್ರೊಫೆಸರ್ ನಿಮಾನ್ಸ್), ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಸಾಧನೆ ಮಾಡಿದ ವ್ಯಕ್ತಿಗಳು ಈ ಸಮಿತ್‍ನಲ್ಲಿ ವೈದ್ಯಕೀಯ ಸೇವೆಯನ್ನು ವಿಸ್ತರಿಸುವ ಬಗ್ಗೆ, ಆರ್ಥಿಕ ನಿರ್ವಹಣೆ ಬಗ್ಗೆ, ಆಡಳಿತದ ಬಗ್ಗೆ, ವೈದ್ಯರುಗಳ ಸಾಂಘಿಕ ವ್ಯವಹಾರ, ಉದ್ಯಮದ ಬಗ್ಗೆ ಮಲ್ಟಿಪಲ್ ಪ್ಯಾನೆಲ್ ಡಿಸ್ಕಶನ್ಸ್ ನಡೆಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಅವಿನಾಶ್, ಡಾ. ಶಶಿಕಾಂತ್, ಬೆನಕಪ್ಪ ನಂಜಪ್ಪ ಹಾಸ್ಪಿಟಲ್, ಶಿವಕುಮಾರ್, ಡಾ. ಶಂಭುಲಿಂಗ, ಪ್ರಕಾಶ್, ರವೀಂದ್ರ ಬೆಣ್ಣೆಹಳ್ಳಿ, ರಾಜೇಶ್ ಸುರಗಿಹಳ್ಳಿ ಮುಂತಾದರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post