ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಪಂಚವನ್ನು ಜೋಡಿಸುವುದೇ ಧರ್ಮ. ಸುಖ ದುಃಖಗಳಿಗೆ ನೀವು ಮಾಡಿದ ಕರ್ಮಗಳೇ ಕಾರಣ ಎಂದು ಶ್ರೀಕ್ಷೇತ್ರ ಹರಿಹರಪುರದ ಶ್ರೀಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು ಇಂದು ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಭಜನಾ ಪರಿಷತ್ ಶಿವಮೊಗ್ಗ ಅರ್ಚಕ ವೃಂದ ಹಾಗೂ ಸಂಸ್ಕಾರ ಪ್ರತಿಷ್ಠಾನ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನಡೆಯುವ 4ನೇ ವರ್ಷದ ಸಾಮೂಹಿಕ ಓಂ ನಮಃ ಶಿವಾಯ ಜಪ ಯಜ್ಞ, ಶ್ರೀ ರುದ್ರಹೋಮ ಹಾಗೂ ಶ್ರೀರಾಮನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

Also read: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ `ಇಡಿ’ ಪ್ರಕರಣ ವಜಾ: ಸುಪ್ರೀಂ ಕೋರ್ಟ್
ದೇವರು ಕರ್ಮಗಳ ಕಾರ್ಯಾಧ್ಯಕ್ಷ ಅಷ್ಟೇ, ಸುಪ್ರೀಂ ಕೋರ್ಟ್‍ನಲ್ಲಿ ಅಂತಿಮವಾಗಿ ನ್ಯಾಯಾಧೀಶರು ನಿರಾಪರಾಧಿಯನ್ನು ಅಪರಾಧಿಯೆಂದು ಹೇಳಲಾಗುವುದಿಲ್ಲ. ಅಪರಾಧಿಗೆ ಶಿಕ್ಷೆಯನ್ನು ಕಡಿಮೆ ಮಾಡಬಹುದಷ್ಟೇ. ಅದೇ ರೀತಿ ದೇವರ ಮೊರೆ ಹೋದರೆ ಕಷ್ಟ ಬಂದಾಗ ತಮ್ಮ ಸಂಕಷ್ಟಗಳಿಗೆ ದೇವರು ಪರಿಹಾರ ನೀಡಿ ಶಿಕ್ಷೆ ಕಡಿಮೆ ಮಾಡಬಹುದಷ್ಟೇ ಆದರೆ, ಸಂಪೂರ್ಣ ಕರ್ಮಫಲ ಅದು ಕೆಟ್ಟದಾಗಿದ್ದಲ್ಲಿ ವಿಧಿ ಬರಹದಂತೆ ಅನುಭವಿಸಲೇಬೇಕಾಗುತ್ತದೆ ಎಂದರು.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನಾನ ಶರ್ಮ ಅವರಿಗೆ ಶ್ರೀರಾಮಾನುಗ್ರಹ ಪ್ರಶಸ್ತಿ ಪ್ರದಾನವನ್ನು ಶ್ರೀಗಳು ಮಾಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ವಿನಾಯಕ್ ಬಾಯರಿ, ಶಬರೀಶ್ ಕಣ್ಣನ್, ವಿನಯ್ ಮತ್ತಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post