ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಲು ಕಾರ್ಯಕರ್ತರು ಮೈಮರೆಯದೇ ಹೇಗೆ ಕೆಲಸ ಮಾಡಬೇಕೆಂದರೆ ನಮ್ಮ ವಿರುದ್ಧ ಬೇರೆ ಪಕ್ಷದವರು ನಿಲ್ಲುವ ಧೈರ್ಯ ಮಾಡಬಾರದು ಎಂದು ಬಿ.ಎಸ್. ಯಡಿಯೂರಪ್ಪ #B S Yadiyurappa ಅವರು ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪ #K S Eshwarappa ಅವರಿಗೆ ಟಾಂಗ್ ನೀಡಿದ್ದಾರೆ.
ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಇವತ್ತಿನ ಮೆರವಣಿಗೆ ನೋಡಿದಾಗ, 3 ಲಕ್ಷಕ್ಕಿಂತ ಅಧಿಕ ಮತಗಳಿಂದ ರಾಘವೇಂದ್ರ ಗೆಲ್ಲುವುದು ಖಚಿತವಾಗಿದೆ ಎಂದರು.
ಕಾಂಗ್ರೆಸ್ ಮುಳುಗುವ ಹಡಗು ಎಂಬುವುದು ಎಲ್ಲರಿಗೂ ಗೊತ್ತಾಗಿದೆ. ಮುಂದಿನ ಪ್ರಧಾನಿ ಮೋದಿ #PM Modi ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು #H D Devegowda ಕೂಡ ಮೋದಿ ಜೊತೆಗೆ ಕೈಜೋಡಿಸಿದ್ದಾರೆ. ಇಬ್ಬರ ಹೊಂದಾಣಿಕೆಯಲ್ಲಿ ಬಹಳ ಶಕ್ತಿಯಿದೆ. ಒಟ್ಟಾಗಿ ಓಡಾಡಿ ರಾಜ್ಯದ 28 ಕ್ಷೇತ್ರವನ್ನು ಗೆಲ್ಲಿಸುತ್ತೇವೆ. ಆದರೂ ಕೂಡ ನಮ್ಮ ಕಾರ್ಯಕರ್ತರು ಮೈಮರೆಯದೆ ಕೆಲಸ ಮಾಡಬೇಕು. ಇನ್ನೂ ಮುಂದೆ ಬೇರೆ ಪಕ್ಷದವರು ಯಾರು ಕೂಡ ನಮ್ಮ ಎದುರಿಗೆ ನಿಲ್ಲುಸ ಧೈರ್ಯ ಮಾಡಬಾರದು ಎಂದರು.
ಸಿ.ಟಿ.ರವಿ ಮಾತನಾಡಿ, #C T Ravi ಆರ್’ಎಸ್’ಎಸ್ ಮತ್ತು ಬಿಜೆಪಿ ಪ್ರಾರಂಭವಾಗಿದ್ದೇ ರಾಷ್ಟ್ರೀಯ ಹಿತ ಕಾಪಾಡಲು ನಾವು ಸದಾಕಾಲ ಹಿಂದುತ್ವಕ್ಕೆ ಬದ್ಧವಾಗಿ ರಾಜಕಾರಣ ಮಾಡುತ್ತೇವೆ. ಕಾಂಗ್ರೆಸ್ ಬಂದ ಮೇಲೆ ಬಿಲದಲ್ಲಿ ಅಡಗಿಕುಳಿತುಕೊಂಡು ಹಾವು ಚೇಳುಗಳು ತಲೆಯೆತ್ತಿ ಹೊರಗೆ ಬಂದಿವೆ ಎಂದರು.
Also read: ಬಿ.ವೈ. ರಾಘವೇಂದ್ರ ಆಸ್ತಿ ಎಷ್ಟು? ಯಾರಿಗೆಲ್ಲಾ ಸಾಲ ನೀಡಿದ್ದಾರೆ? ಅವರಿಗೆಷ್ಟು ಸಾಲವಿದೆ? ಇಲ್ಲಿದೆ ವಿವರ
ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ರಾಮನವಮಿ ದಿನ ಜೈಶ್ರೀರಾಮ್ ಎಂದವರಿಗೆ ಹಲ್ಲೆ ಮಾಡುತ್ತಾರೆ. ಪಿತ್ತ ನೆತ್ತಿಗೇರಿದ ಪುಂಡರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ದಲಿತ ವಿರೋಧಿ ಸರ್ಕಾರವಾಗಿದ್ದು, ದಲಿತರ 14 ಸಾವಿರ ಕೋಟಿ. ರೂ.ಗಳನ್ನು ಗ್ಯಾರಂಟಿಗೆ ಬಳಸಿದ್ದಾರೆ. ಅವರ ಓಟು ಕೇಳುವ ನೈತಿಕತೆ ಇಲ್ಲ. ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. ರಾಜ್ಯಕ್ಕೆ 10 ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯ ಅಭಿವೃದ್ಧಿಗಳನ್ನು ಉದ್ಘಾಟನೆ ಮಾಡಿದ್ದೇ ಅವರ ಸಾಧನೆ ಎಂದರು.
ಹಿಂದೂ ನಾಯಕ ಅರುಣ್ ಪುತ್ತಿಲ್ಲ #Arun Puttila ಮಾತನಾಡಿ, ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆ ಇದಾಗಿದೆ. ಸಿಎಎ ಜಾರಿಗೆ ತಂದಿದ್ದಾರೆ. 370 ಅರ್ಟಿಕಲ್ ರದ್ದು ಮಾಡಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಹಿಂದೂ ರಾಷ್ಟçದ ಪರಿಕಲ್ಪನೆಯ ಸರ್ಕಾರ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿಗೆ ಬೆಂಬಲ ನೀಡಿ ಎಂದರು.
ಮಾಜಿ ಸಿ.ಎಂ. ಬೊಮ್ಮಾಯಿ #Bommai ಮಾತನಾಡಿ, ಕಾಂಗ್ರೆಸ್ ಸ್ಪರ್ಧಿಸಿದ್ದು ಕೇವಲ 235 ಸ್ಥಾನಗಳಲ್ಲಿ ದೇಶ ಆಳಲು 272 ಸ್ಥಾನ ಬೇಕು. ಕನಿಷ್ಟ ಸ್ಪರ್ಧೆಯನ್ನು ಮಾಡದ ಕಾಂಗ್ರೆಸ್ ಯಾವ ರೀತಿ ಆಳಲು ಸಾಧ್ಯ ಎಂದರು.
ಜನರಿಗೆ ಮೋಸ ಮಾಡುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಾರ್ಟಿ ಜಲಜೀವನ ಮಿಷನ್ ಮೂಲಕ ನೀರು ಒದಗಿಸಿದ್ದು, ಕರೋನ ಸಂದರ್ಭದಲ್ಲಿ 135 ಕೋಟಿ ಜನರಿಗೆ ವಿಶ್ವಾಸ ತುಂಬಿ ಪ್ರಾಣ ಉಳಿಸಿದ್ದು, ನರೇಂದ್ರ ಮೋದಿ ಸರ್ಕಾರ ಎಂಬುವುದನ್ನು ಜನರು ಮರೆಯಬಾರದು. 4.5 ಲಕ್ಷಕ್ಕೂ ಅಧಿಕ ಮತಗಳಿಂದ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಾನು ಮಾಡಿದ ಅಭಿವೃದ್ಧಿಯನ್ನು ಶಿವಮೊಗ್ಗ ಕ್ಷೇತ್ರದ ಜನತೆ ಕಣ್ಣಾರೆ ಕಂಡಿದ್ದಾರೆ. ಎಂಪಿಎಂಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್ ಸರ್ಕಾರ ವಿಐಎಸ್’ಎಲ್ ಜೀವಂತವಾಗಿಡಲು ನನ್ನ ಶಕ್ತಿ ಮೀರಿ ಶ್ರಮಿಸಿದ್ದೇನೆ. ಈಗ ಕುಮಾರಣ್ಣ ಕೂಡ ನನ್ನ ಜೊತೆಗೆ ಸಂಸದರಾಗಿ ಬರುತ್ತಾರೆ. ನಾವಿಬ್ಬರು ಸೇರಿ ವಿಐಎಸ್’ಎಲ್ ಪುನಶ್ಚೇತನಗೊಳಿಸುತ್ತೇವೆ ಎಂದರು.
ಶಾಸಕರಾದ ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಡಿ.ಎಸ್. ಅರುಣ್, ಬೋಜೇಗೌಡ, ಭಾರತಿಶೆಟ್ಟಿ, ಗುರಾಜ ಗಂಟಿವಳಿ, ಶಾರದಾ ಪೂರ್ಯನಾಯ್ಕ, ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ಕೆ.ಬಿ. ಪ್ರಸನ್ನ ಕುಮಾರ್, ಟಿ.ಡಿ. ಮೇಘರಾಜ್ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಹೇಶ್ ಹುಲ್ಮಾಡಿ, ಚಂದ್ರಶೇಖರ್, ಮಲ್ಲಿಕಾರ್ಜುನ ಹಕ್ರೆ, ವಿ.ಜಿ. ಪರಶುರಾಮ್ ಬಿಜೆಪಿಗೆ ಸೇರ್ಪಡೆಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post